ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಹಿಂದೂ ಸಮಾಜೋತ್ಸವ ನಿಮಿತ್ತ ಭಾನುವಾರ ನಡೆದ ಶೋಭಾಯಾತ್ರೆಯಲ್ಲಿ ಕಾಂಗ್ರೆಸ್ ಶಾಸಕ ಬಾಬಾಸಾಹೇಬ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರು, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಕೊರಳಲ್ಲಿ ಕೇಸರಿ ಪಟ್ಟಿ ಧರಿಸಿಕೊಂಡು ಹೆಜ್ಜೆಹಾಕಿದರು.

ಜಾಂಝ್ ಪಥಕ, ಡೊಳ್ಳು ಕುಣಿತ, ಕಾರ್ಯಕರ್ತರ ಜಯಘೋಷಗಳ ಮಧ್ಯೆ ನಂದಿಕೋಲು ಮೆರವಣಿಗೆ ಸಾಗಿತು. ರಸ್ತೆಯುದ್ದಕ್ಕೂ ಕೇಸರಿ ಪರಪರಿ, ಧ್ವಜಕಟ್ಟಿ ಇಡೀ ಪಟ್ಟಣವನ್ನು ಅಂದಗೊಳಿಸಲಾಗಿತ್ತು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಉತ್ತರ ಕರ್ನಾಟಕದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ವ್ಯವಸ್ಥಾಪಕ ಪ್ರಮುಖ ಕೃಷ್ಣಾನಂದ ಕಾಮತ, ವಿಎಚ್ಪಿ ಮುಖಂಡ ಕೃಷ್ಣ ಭಟ್, ಸಾಗರ ಕಾಮಕರ, ಪ್ರತಿಭಾ ಉಣಕಲ್ಲಕರ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.