ಒಂದೆಡೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು, ಮತ್ತೊಂದೆಡೆ ಬಿಜೆಪಿ ಸರ್ಕಾರದ ಲೂಟಿ. ಎರಡರ ಮಧ್ಯೆ ಸಂಘರ್ಷ ನಡೆದಿದೆ. ಗ್ಯಾರಂಟಿಗಳು ನೆಮ್ಮದಿ ನೀಡುತ್ತಿದ್ದರೆ ಕೇಂದ್ರದ ನೀತಿಗಳು ಆತಂಕ ತಂದೊಡ್ಡಿವೆ.
– ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಧಾನ ಕಾರ್ಯದರ್ಶಿ, ಎಐಸಿಸಿ
ಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಸಿಲಿಂಡರ್‌ನ ದರ ಏರಿಕೆಯೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಮೂಲ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ಮೇಲಿರಬೇಕು.
– ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ಬಿಜೆಪಿಯವರು ನಮ್ಮ ಸಮಾವೇಶ ಹಾಳು ಮಾಡಲು ಯತ್ನಿಸಿದ್ದಾರೆ. ನಮಗೇನು ಕಾರ್ಯಕರ್ತರಿಲ್ಲವೇ? ಶಕ್ತಿ ಇಲ್ಲವೇ? ಇದೇ ರೀತಿಯ ಪಾಠವನ್ನು ನಾವೂ ಕಲಿಸುತ್ತೇವೆ.
– ಲಕ್ಷ್ಮೀ ಹೆಬ್ಬಾಳಕರ, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ