ಮೂಡಲಗಿ: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ನೀಡಿರುವ ಹೇಳಿಕೆಯನ್ನು ಖಂಡಿಸಿ ಅವರ ಪ್ರತಿಕೃತಿ ದಹಿಸಿ ಭಾನುವಾರ ಇಲ್ಲಿಯ ಕಲ್ಮೇಶ್ವರ ವೃತ್ತದಲ್ಲಿ ಕಾಂಗ್ರೆಸ್ನ ಅರಭಾವಿ ಮತ್ತು ಕೌಜಲಗಿ ಬ್ಲಾಕ್ಗಳ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು. ಬಿಜೆಪಿ ವಿರುದ್ಧ, ಸಂಜಯ ಪಾಟೀಲ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ‘ಬಿಜೆಪಿಯ ಸಂಜಯ ಪಾಟೀಲ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಬಿಜೆಪಿಯ ಕೆಟ್ಟ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಪ್ರಧಾನಿ ಮೋದಿ ಅವರು ಹೇಳಿರುವ ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಮಾತಿಗೆ ಕವಡೆ ಕಾಸಿನ ಬೆಲೆ ಇಲ್ಲ. ಬಿಜೆಪಿಯದು ಬಡಾಯಿ ಮಾತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಜಯ ಪಾಟೀಲ ಅವರ ವರ್ತನೆಯು ಮಹಿಳಾ ಕುಲಕ್ಕೆ ಮಾಡಿದ ಅಪಮಾನ, ಅವರನ್ನು ಕೂಡಲೇ ಬಂಧಿಸಿ ಎಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಮುಖಂಡ ವಿ.ಪಿ. ನಾಯ್ಕ, ಗುರಪ್ಪ ಹಿಟ್ಟಣಗಿ, ಎಸ್.ಆರ್. ಸೋನವಾಲಕರ, ಗಿರೀಶ ಕರಡಿ, ರವಿ ತುಪ್ಪದ ಮಾತನಾಡಿದರು.

ಅರಭಾವಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಲೀಮ್ ಇನಾಮದಾರ, ಬಸನಗೌಡ ಪಾಟೀಲ, ರವಿ ಮೂಡಲಗಿ, ಮಹಾಲಿಂಗಯ್ಯ ನಂದಗಾಂವಮಠ, ಜಾಕೀರ ನದಾಫ್, ಮಹಾದೇವ ಮೇತ್ರಿ, ರಮಜಾನ ಬಿಜಾಪೂರ, ಸುರೇಶ ಮಗದುಮ್, ರಾಬರ್ಟ ಮೂಡಲಗಿ, ಜಗದೀಶ ಜೋಗನ್ನವರ, ಮದಾರ ಜಕಾತಿ, ಇಮಾಮ ಹುನ್ನೂರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.