ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 2 ತಿಂಗಳ ಬಳಿಕ ಸೀಲ್‌ಡೌನ್‌ ಮುಕ್ತ; ಸಂಭ್ರಮಿಸಿದ ಗ್ರಾಮಸ್ಥರು

Last Updated 6 ಜೂನ್ 2020, 11:15 IST
ಅಕ್ಷರ ಗಾತ್ರ


ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): ಎರಡು ತಿಂಗಳಿಗಿಂತಲೂ ಹೆಚ್ಚು ಕಾಲ ಸೀಲ್‌ಡೌನ್‌ ಆಗಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಗ್ರಾಮವು ಶನಿವಾರ ಮುಕ್ತವಾಯಿತು. ಇದರಿಂದ ಸಂತೋಷಪಟ್ಟ ಗ್ರಾಮಸ್ಥರು, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ನವದೆಹಲಿಯ ತಬ್ಲೀಗ್‌ ಸಭೆಯಲ್ಲಿ ಭಾಗವಹಿಸಿ ವಾಪಸ್ಸಾಗಿದ್ದ ಯುವಕನೊಬ್ಬನಿಂದ ಗ್ರಾಮದಲ್ಲಿ ಕೊರೊನಾ ಸೋಂಕು ಹರಡಿತ್ತು. ಏ.3ರಿಂದ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಒಬ್ಬರ ನಂತರ ಒಬ್ಬರಂತೆ ಸುಮಾರು 49 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಒಬ್ಬ ಮಹಿಳೆ ಸಾವನ್ನಪ್ಪಿದ್ದರು.

ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮಕೈಗೊಂಡು, ಜನದಟ್ಟಣೆಯನ್ನು ನಿಯಂತ್ರಿಸಿತು. ಸೋಂಕು ಇನ್ನಷ್ಟು ಹರಡದಂತೆ ಕ್ರಮಕೈಗೊಂಡಿತ್ತು. ಇದರ ಫಲವಾಗಿ ಈಗ ಸೋಂಕು ಮುಕ್ತ ಗ್ರಾಮವಾಗಿದ್ದು, ಕಂಟೈನ್ಮೆಂಟ್‌ ವಲಯದಿಂದ ಮುಕ್ತಗೊಂಡಿದೆ.

ವ್ಯಾಪಾರಸ್ಥರು ಅಂಗಡಿ– ಮುಂಗಟ್ಟುಗಳನ್ನು ತೆರೆದರು. ಗ್ರಾಹಕರು ಪರಸ್ಪರ ಆಂತರ ಕಾಯ್ದುಕೊಳ್ಳಲು ಸರದಿಯಲ್ಲಿ ಗುರುತುಗಳನ್ನು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್‌ಗಳನ್ನು ಗ್ರಾಮಸ್ಥರು ಧರಿಸುತ್ತಿದ್ದಾರೆ. ಎಲ್ಲ ಅಂಗಡಿಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ. ಜನದಟ್ಟಣೆ ಉಂಟಾಗದಂತೆ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT