ಸೋಮವಾರ, ಏಪ್ರಿಲ್ 6, 2020
19 °C

ಕೋವಿಡ್-19 ಸೋಂಕಿನ ಭೀತಿ: ಬೆಳಗಾವಿಯಲ್ಲಿ ಸಾಮೂಹಿಕ ಹೋಳಿ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್-19 ಸೋಂಕಿನ ಭೀತಿ ಹರಡುತ್ತಿರುವುದರಿಂದಾಗಿ, ನಗರದಲ್ಲ ಹೋಳಿ ಹಬ್ಬವನ್ನು ಸಾಮೂಹಿಕ‌ ಆಚರಣೆ ಮಾಡುತ್ತಿಲ್ಲ.

ಪ್ರತಿ ವರ್ಷ ಬೆಳಗಾವಿಯಲ್ಲಿ ಕಲರ್‌ಫುಲ್ ಹೋಳಿ ಆಚರಿಸಲಾಗುತ್ತಿತ್ತು. ಶಾಸಕ ಅಭಯ ಪಾಟೀಲ ಆಯೋಜಿಸುತ್ತಿದ್ದ 'ಹೋಳಿ ಮಿಲನ್' ಹಾಗೂ ಮಹಿಳೆಯರು ಮತ್ತು ಮಕ್ಕಳಿಗಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಆಯೋಜಿಸುತ್ತಿದ್ದ 'ವುಮೇನಿಯಾ ಹೋಳಿ' ಕಾರ್ಯಕ್ರಮ ರದ್ದುಪಡಿಸಲಾಗಿದೆ. ಇವುಗಳಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಿದ್ದರು.

ಮುಂಜಾಗ್ರತಾ ಕ್ರಮವಾಗಿ ಈ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೋಳಿಯ ರಂಗು ಮಾಸಿದೆ.

ಮನೆಗಳ ಬಳಿ ಮಕ್ಕಳು ಹಾಗೂ ಸ್ಥಳೀಯರು ಬಣ್ಣದಾಟ ಆಡಿ ಸಂಭ್ರಮ ಆಚರಿಸಿದರು. ಸೋಮವಾರ ರಾತ್ರಿ ಸೌದೆಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿ 'ಕಾಮದಹನ' ಮಾಡುವ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು