ಬೆಳಗಾವಿ: ನಾನು ಕಡೋಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದೆ. ಹಳ್ಳಿಗಳಿಗೆ ತೆರಳಿ ಜನರಿಂದ ಗಂಟಲು ದ್ರವದ ಮಾದರಿ ಸಂಗ್ರಹ ಕಾರ್ಯ ಮಾಡುತ್ತಿದ್ದೆ. ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿ ಪ್ರತ್ಯೇಕವಾಗಿ ಇರುತ್ತಿದ್ದೆ. ಒಂದು ದಿನ ಚಳಿ ಮತ್ತು ಸುಸ್ತಿನ ಅನುಭವವಾಯಿತು. ಹೀಗಾಗಿ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಪರೀಕ್ಷೆ ಮಾಡಿಸಿದಾಗ ಕೋವಿಡ್ ದೃಢಪಟ್ಟಿತು. ಆತಂಕವೇನೂ ಆಗಲಿಲ್ಲ. ಮನೆಯವರೆಲ್ಲರಿಗೂ ನೆಗೆಟಿವ್ ಬಂತು.

ಹೋಂ ಐಸೊಲೇಷನ್‌ನಲ್ಲಿದ್ದೆ. ಇಲಾಖೆಯಿಂದ ನೀಡುತ್ತಿದ್ದ ಔಷಧಿಗಳನ್ನು ಒದಗಿಸಿದ್ದರು. ಒಂದೆರಡು ದಿನ ಜ್ವರ ಕಾಣಿಸಿಕೊಂಡಿತ್ತು. ಔಷಧಿಗಳನ್ನು ಸೇವಿಸಿ ವಾರದಲ್ಲಿ ಗುಣಮುಖವಾದೆ. ಇಂಜೆಕ್ಷನ್ ಅಗತ್ಯ ಬರಲಿಲ್ಲ.

ಒಂದೊಮ್ಮೆ ಕೋವಿಡ್ ದೃಢಪಟ್ಟರೂ, ಧೃತಿಗೆಡಬಾರದು. ಮಾನಸಿಕವಾಗಿ ಗಟ್ಟಿಯಾಗಿರಬೇಕು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಮಾಸ್ಕ್ ಧರಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಸ್ವಚ್ಛತೆಗೆ ಗಮನ ಕೊಡಬೇಕು. ಔಷಧಿಯು ಅರ್ಧ ಗುಣಪಡಿಸಿದರೆ ನಮ್ಮ ಧೈರ್ಯ ಇನ್ನರ್ಧ ಗುಣಪಡಿಸುತ್ತದೆ. ಸೋಂಕಿತರಿಗೆ ಕುಟುಂಬದವರೂ ಬೆಂಬಲವಾಗಿ ನಿಲ್ಲಬೇಕು. ಸಮಾಜ ಕಡೆಗಣಿಸಬಾರದು. ಜನರು ವದಂತಿಗಳಿಗೆ ಕಿವಿಕೊಡಬಾರದು.
–ಜ್ಯೋತಿ ಹೊಸಟ್ಟಿ, ಶಾಹೂನಗರ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.