ಗುರುವಾರ , ಜುಲೈ 29, 2021
26 °C

ಕೋವಿಡ್ 3ನೇ ಅಲೆ: ಮುನ್ನೆಚ್ಚರಿಕೆ ವಹಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ ಜಿಲ್ಲೆ): ‘ಕೋವಿಡ್ 3ನೇ ಅಲೆ ಬಾರದಂತೆ ತಡೆಯಲು ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ ಹೇಳಿದರು.

ರಾಷ್ಟ್ರ ಸೇವಿಕಾ ಸಮಿತಿಯಿಂದ ಗುರುವಾರ ಆನ್‌ಲೈನ್‌ನಲ್ಲಿ ನಡೆದ ‘ವೈದ್ಯರ ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೋಂಕು ಮಕ್ಕಳನ್ನು ಬಾಧಿಸುವ ವರದಿಗಳಿರುವುದರಿಂದಾಗಿ ಸಮಿತಿಯಿಂದ ತಾಯಂದಿರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ವೈದ್ಯೆಯರ ಮೂಲಕ ಮಾರ್ಗದರ್ಶನ ಮಾಡಿಸಲಾಗುವುದು. ಯಾವ ರೀತಿ ಎಚ್ಚರಿಕೆ ವಹಿಸಬೇಕು, ಆಹಾರದಲ್ಲಿ ಯಾವ ಅಂಶಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು ಎಂಬಿತ್ಯಾದಿ ವಿಷಯಗಳನ್ನು ತಿಳಿಸಲಾಗುವುದು’ ಎಂದರು.

ಚಿಕ್ಕೋಡಿ, ಅಥಣಿ, ರಾಯಬಾಗ, ಸದಲಗಾ, ಹುಕ್ಕೇರಿ, ಗೋಕಾಕ, ಸಂಕೆಶ್ವರ, ಘಟಪ್ರಭಾ, ತುಕಾನಟ್ಟಿ ಹಾರೂಗೇರಿಯ ವೈದ್ಯೆಯರು ಪಾಲ್ಗೊಂಡಿದ್ದರು.

ಸಮಿತಿಯ ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ, ಸಂಪರ್ಕ ಪ್ರಮುಖರಾದ ವಾಣಿ ರಮೇಶ, ಡಾ.ಮನೀಶಾ ಭಾಂಡಣಕರ, ಡಾ.ಜ್ಯೋತಿ ಚಿಂಚಣಿಕರ, ಶಾಂಭವಿ ಅಶ್ವತ್ಥಪುರ, ಗೀತಾ ಮೇತ್ರಿ ಭಾಗವಹಿಸಿದ್ದರು.

ಮೃಣಾಲಿನಿ ದೇಶಪಾಂಡೆ ನಿರೂಪಿಸಿದರು. ಅನುಪಾ ಕೌಶಿಕ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು