ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿ ಹರಿದ ಬಳ್ಳಾರಿ ನಾಲೆ: ನೂರಾರು ಎಕರೆ ಬೆಳೆ ಜಲಾವೃತ

Last Updated 11 ಆಗಸ್ಟ್ 2020, 7:02 IST
ಅಕ್ಷರ ಗಾತ್ರ

ಅಂಕಲಗಿ: ಬಳ್ಳಾರಿ ನಾಲೆ ಉಕ್ಕಿ ಹರಿದಿದ್ದರಿಂದ ಅಕ್ಕತಂಗೇರಹಾಳ, ಹುದಲಿ, ಸುಲಧಾಳ, ಬೂದಿಹಾಳ, ಯದ್ದಲಗುಡ್ಡ, ಲಗಮೇಶ್ವರ, ಅಂಕಲಗಿ, ಡುಮ್ಮಉರಬಿನಹಟ್ಟಿ, ದಾಸನಟ್ಟಿ, ಕುಂದರಗಿ ಗ್ರಾಮಗಳ ವ್ಯಾಪ್ತಿಯಲ್ಲಿ ನೂರಾರು ಎಕರೆ ಗೋವಿನಜೋಳ, ಸೋಯಾಅವರೆ ಮೊದಲಾದ ಬೆಳೆಗಳು ನೀರು ಪಾಲಾಗಿವೆ.

ಅಲ್ಲಲ್ಲಿ ತರಕಾರಿ ಬೆಳೆಗಳು ಸಂಪೂರ್ಣ ನಾಶವಾಗಿವೆ. ಅಕ್ಕತಂಗೇರಹಾಳದ ಪ್ರಗತಿಪರ ‌ಕೃಷಿಕ ಬಸವಂತ ಈಶ್ವರಪ್ಪಗೋಳ ಅವರು ಒಂದು ಎಕರೆಯಲ್ಲಿ ಕೊತ್ತಂಬರಿ ಬೆಳೆದಿದ್ದರು. ‘ಬೆಳೆ ಮುಳುಗಿದ್ದು, ಅಪಾರ ಹಾನಿ ಸಂಭವಿಸಿದೆ’ ಎಂದು ತಿಳಿಸಿದರು.

ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT