ಖಾನಾಪುರ (ಬೆಳಗಾವಿ ಜಿಲ್ಲೆ): ಸಿ.ಟಿ.ರವಿ ಅವರನ್ನು ವಿಚಾರಣೆಗಾಗಿ ಖಾನಾಪುರ ಠಾಣೆಗೆ ಕರೆತಂದಾಗ (ಡಿ.19ರಂದು) ಬಿಜೆಪಿ ಮುಖಂಡರಿಗೆ ಠಾಣೆಯೊಳಗೆ ಬರಲು ಅನುಮತಿ ನೀಡಿ ಕರ್ತವ್ಯಲೋಪ ಎಸಗಿದ ಆರೋಪದಡಿ, ಇನ್ಸ್ಪೆಕ್ಟರ್ ಮಂಜುನಾಥ ನಾಯ್ಕ ಅವರನ್ನು ಅಮಾನತುಗೊಳಿಸಿ ಉತ್ತರವಲಯ ಐಜಿಪಿ ವಿಕಾಶಕುಮಾರ ವಿಕಾಶ ಆದೇಶ ಹೊರಡಿಸಿದ್ದಾರೆ.

ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ, ತಾಲ್ಲೂಕಿನ ವಿವಿಧ ಸಂಘಟನೆಯವರು ಶುಕ್ರವಾರ (ಡಿ.27) ಖಾನಾಪುರ ಬಂದ್ಗೆ ಕರೆ ಕೊಟ್ಟಿದ್ದಾರೆ.

‘ಮಂಜುನಾಥ ನಾಯ್ಕ ವಿವಿಧ ಸಮುದಾಯದವರು, ರಾಜಕೀಯ ಪಕ್ಷದವರು ಮತ್ತು ಸಂಘ-ಸಂಸ್ಥೆಗಳ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇಂಥ ದಕ್ಷ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಬಾರದು’ ಎಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ಸಂಘಟನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಂಡಲಗಿ ಆಗ್ರಹಿಸಿದ್ದಾರೆ.

‘ಪ್ರಕರಣದ ಸಂಬಂಧ ಇಲಾಖೆ ಮಟ್ಟದಲ್ಲೇ ನ್ಯಾಯ ಸಿಗುವ ವಿಶ್ವಾಸವಿದೆ. ಯಾರೂ ಬಂದ್ಗೆ ಕರೆ ಕೊಡಬಾರದು ಅಥವಾ ಪ್ರತಿಭಟಿಸಬಾರದು’ ಎಂದು ಮಂಜುನಾಥ ನಾಯ್ಕ ಅವರು ವಿಡಿಯೊ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.