ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಮಶಿ ಮಂಡಳ ಸುವರ್ಣ ಸಂಭ್ರಮ ರ‍್ಯಾಲಿ

Last Updated 7 ಮೇ 2019, 11:10 IST
ಅಕ್ಷರ ಗಾತ್ರ

ಬೆಳಗಾವಿ: ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಕ್ಕೆ ಐವತ್ತು ವರ್ಷಗಳು ತುಂಬಿದ ಅಂಗವಾಗಿ ಮೇ 7ರಿಂದ ಒಂದು ವರ್ಷದವರೆಗೆ ನಡೆಯುವ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.

ಮರಾಠಿ ವಿದ್ಯಾನಿಕೇತನ ಆವರಣದಲ್ಲಿ ಭಾಯಿ ದಾಜಿಬಾ ದೇಸಾಯಿ, ಮಹಾತ್ಮಾ ಜ್ಯೋತಿಬಾ ಫುಲೆ ಮತ್ತು ಶಂಕರರಾವ ಚವಾಣ ಅವರ ಫೋಟೊಗಳಿಗೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಲಾಯಿತು. ರಾಷ್ಟ್ರೀಯ ಕುಸ್ತಿಪಟು ಹಾಗೂ ಜ್ಯೋತಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಶೀತಲ ಪಾಟೀಲ ಕ್ರೀಡಾ ಜ್ಯೋತಿಯನ್ನು ರಮೇಶರಾವ ಕಾಕತಕರ ಅವರಿಗೆ ಅರ್ಪಿಸಿ ರ‍್ಯಾಲಿಗೆ ಚಾಲನೆ ನೀಡಿದರು.

ಮುಖಂಡ ಕೃಷ್ಣ ಮೆಣಸೆ, ದಮಶಿ ಮಂಡಳದ ಮಾಜಿ ಕಾರ್ಯದರ್ಶಿ ವಿ.ಎ. ಪಾಟೀಲ, ಸಂಸ್ಥೆಯ ಸದಸ್ಯರಾದ ಶಂಕರರಾವ ಪಾಟೀಲ, ರಮೇಶರಾವ ಕಾಕತಕರ, ಭೂಷಣ ಕಾಕತಕರ, ನಾಗೇಂದ್ರ ಹೈಬತ್ತಿ, ಸಂಸ್ಥೆ ಉಪಾಧ್ಯಕ್ಷ ರಾಜಾಭಾವು ಪಾಟೀಲ, ಕಾರ್ಯದರ್ಶಿ ಸುಭಾಷ ಓವುಳಕರ, ಜಂಟಿ ಕಾರ್ಯದರ್ಶಿ ಪ್ರೊ.ವಿಕ್ರಮ ಪಾಟೀಲ, ಸದಸ್ಯರಾದ ಆರ್.ಕೆ. ಪಾಟೀಲ, ಮಾಜಿ ಪ್ರಾಚಾರ್ಯ ಎ.ಎ. ಘೋರ್ಪಡೆ ಇದ್ದರು.

ಸಂಸ್ಥೆಯ ದೇಣಿಗೆದಾರರು, ಹಿತೈಷಿಗಳು, ಪಾಲಕರು, ಅಭಿಮಾನಿಗಳು, ಶಿಕ್ಷಕರು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಬೃಹತ್ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಮರಾಠಿ ವಿದ್ಯಾನಿಕೇತನದಿಂದ ಆರಂಭಗೊಂಡ ಮೆರವಣಿಗೆ ಧರ್ಮವೀರ ಸಂಭಾಜಿ ಚೌಕ, ಕಿರ್ಲೋಸ್ಕರ್‌ ರಸ್ತೆ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಗೋಂಧಳಿ ಗಲ್ಲಿ, ಚನ್ನಮ್ಮ ವೃತ್ತದಲ್ಲಿ ಸಾಗಿ ಜ್ಯೋತಿ ಕಾಲೇಜಿನಲ್ಲಿ ಮುಕ್ತಾಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT