ಸವದತ್ತಿ (ಬೆಳಗಾವಿ ಜಿಲ್ಲೆ): ನಗರದ ಹೊರವಲಯದಲ್ಲಿನ ನಿಕ್ಕಂ ಕಲ್ಯಾಣ ಮಂಟಪದ ಹತ್ತಿರ ಗುರುವಾರ ರಾತ್ರಿ ಉಪ ಮುಖ್ಯಮಂತ್ರಿ ಅವರ ಆಪ್ತ ಕಾರ್ಯದರ್ಶಿ ರಾಜೆಂದ್ರ ಪ್ರಸಾದ ಅವರಿದ್ದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ, ಕವಲಪೇಠ ಓಣಿಯ ನಿವಾಸಿ ಮಂಜುನಾಥ ನೀಲಪ್ಪ ಬೈರನಟ್ಟಿ (30) ಮೃತಪಟ್ಟಿದ್ದಾರೆ.

‘ಕಾರು ಚಾಲಕ ಹೇಮಂತಕುಮಾರ ಅವರ ವೇಗದ ಚಾಲನೆ ಅಪಘಾತಕ್ಕೆ ಕಾರಣ. ರಾಜೇಂದ್ರ ಪ್ರಸಾದ ಅವರ ಕುತ್ತಿಗೆ ಮತ್ತು ಎದೆಗೆ ಗಾಯವಾಗಿದೆ’ ಎಂದು ಸವದತ್ತಿ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಪಿ.ಎಸ್ ರಾಜೇಂದ್ರಪ್ರಸಾದ್ ಮತ್ತು ಕಾರು ಚಾಲಕರಿಗೆ ಗಾಯಗಳಾಗಿದ್ದು, ಅಪಾಯ ಇಲ್ಲ. ಅದರೆ, ಅಪಘಾತದಲ್ಲಿ ಯುವಕ ಮೃತಪಟ್ಟಿದ್ದು ದುರ್ದೈವ. ಅವರ ಮನೆಗೆ ಭೇಟಿ ನೀಡುವೆ. ಅವರ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.