ಸೋಮವಾರ, ಆಗಸ್ಟ್ 8, 2022
24 °C

ಬುಡಾದಿಂದ ಬಹುಮಹಡಿ ಸಂಕೀರ್ಣ; ಬೇಡಿಕೆ ಸಮೀಕ್ಷೆಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ಹೊರವಲಯದ ಕಣಬರ್ಗಿಯಲ್ಲಿ ಬಹುಮಹಡಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಬೇಡಿಕೆ ಸಮೀಕ್ಷೆ ನಡೆಸಲಾಗುತ್ತಿದೆ.

ನಗರದ ಸೂರಿಲ್ಲದ ನಿವಾಸಿಗಳಿಗೆ ನೆರವಾಗಲು ಬಹುಮಹಡಿ ಸಂಕೀರ್ಣ ಕಟ್ಟಡಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಕಣಬರ್ಗಿಯಲ್ಲಿ ಯೋಜನೆ ಸಂಖ್ಯೆ 61ರಲ್ಲಿ ಉದ್ಯಾನ ಸೇರಿದಂತೆ ಮೂಲ ಸೌಕರ್ಯ ಮತ್ತು ಆಧುನಿಕ ವಿನ್ಯಾಸಗಳಿಂದ ನಿರ್ಮಿಸಲಾಗುವುದು. ಇದಕ್ಕಾಗಿ ಅರ್ಜಿಯನ್ನು ಜೂನ್‌ 30ರ ಒಳಗೆ ಬುಡಾ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅಧ್ಯಕ್ಷ ಘೂಳಪ್ಪ ಹೊಸಮನಿ ತಿಳಿಸಿದ್ದಾರೆ.

‘₹ 165 ಕೋಟಿ ವೆಚ್ಚದಲ್ಲಿ 160 ಎಕರೆ 10 ಗುಂಟೆ ಜಾಗದಲ್ಲಿ ಹೊಸ ಬಡಾವಣೆ ನಿರ್ಮಿಸಲು ಉದ್ದೇಶಿಸಿಲಾಗಿದೆ. ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಈ ಯೋಜನೆಯಲ್ಲಿ ವಿವಿಧ ಅಳತೆಯ ಜಿ-3 ಮಾದರಿಯ ಕಟ್ಟಡಗಳನ್ನು ನಿರ್ಮಿಸಲಾಗುವುದು. 24 ಎಕರೆ 20 ಗುಂಟೆ ವಿಸ್ತೀರ್ಣದಲ್ಲಿ ವಿವಿಧ ಅಳತೆಯ 2,760 ಮನೆಗಳ ಸಂಕೀರ್ಣಗಳನ್ನು ಸಿದ್ಧಪಡಿಸಲಾಗುವುದು. ಆಸಕ್ತರು ಯಾವ ಅಳತೆಯ ಕಟ್ಟಡಗಳು ಬೇಕೆಂದು ಬೇಡಿಕೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಕಚೇರಿಯಲ್ಲಿ ಪಡೆಯಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು