ಸೋಮವಾರ, ಮಾರ್ಚ್ 20, 2023
30 °C

ದಿನಸಿ ಕಿಟ್: ಇಲಾಖೆಯಿಂದಲೇ ವಿತರಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್–19 ಸಂಕಷ್ಟದ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಗೆಂದು ಸರ್ಕಾರದಿಂದ ನೀಡಿರುವ ದಿನಸಿ ಕಿಟ್‌ಗಳನ್ನು ಕಾರ್ಮಿಕ ಇಲಾಖೆಯ ಮೂಲಕವೇ ವಿತರಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಕಾರ್ಮಿಕ ಕಲ್ಯಾಣ ಮಂಡಳಿಯವರು ದಿನಸಿ ಕಿಟ್‌ಗಳನ್ನು ನೀಡಬೇಕಾಗಿದೆ. ಆದರೆ, ಕಾರ್ಮಿಕ ಇಲಾಖೆಯವರು ಪದಾರ್ಥಗಳನ್ನು ಜನಪ್ರತಿನಿಧಿಗಳ ಗೋದಾಮಿನಲ್ಲಿ ಇರಿಸಿದ್ದಾರೆ. ಅವರ ಮೂಲಕವೇ ಹಂಚಿಕೆ ನಡೆಯುತ್ತಿದೆ. ಹೋದ ವರ್ಷ ಇದೇ ರೀತಿ ಜನಪ್ರತಿನಿಧಿಗಳ ಸ್ವಾಧೀನಕ್ಕೆ ಕಿಟ್‌ಗಳನ್ನು ನೀಡಿದ್ದರಿಂದಾಗಿ ಬಹಳಷ್ಟು ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ದೊರೆತಿರಲಿಲ್ಲ’ ಎಂದು ಸಂಘದ ಅಧ್ಯಕ್ಷ, ವಕೀಲ ಎನ್.ಆರ್. ಲಾತೂರ ಆರೋಪಿಸಿದರು.

‘ಹೀಗಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಬಂದ ಎಲ್ಲ ಕಿಟ್‌ಗಳನ್ನೂ ಜಿಲ್ಲಾಧಿಕಾರಿಯು ಸ್ವಾಧೀನಕ್ಕೆ ಪಡೆಯಬೇಕು. ಇಲಾಖೆಯ ಮೂಲಕವೇ ನೇರವಾಗಿ ಕಾರ್ಮಿಕರಿಗೆ ವಿತರಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು