ಶುಕ್ರವಾರ, ಜನವರಿ 27, 2023
27 °C

ಕಬ್ಬಿನ ಬಾಕಿಕಿ ₹21 ಕೋಟಿ ಪಾವತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೌಜಲಗಿ: ‘ರೈತರ ಕಬ್ಬಿನ ಬಾಕಿ ₹ 21 ಕೋಟಿ ಪಾವತಿಸಲು ಬಾಗಲಕೋಟೆ ಜಿಲ್ಲಾಧಿಕಾರಿ ಮಧ್ಯಸ್ಥಿಕೆ ವಹಿಸಬೇಕು’ ಎಂದು ರೈತ ಮುಖಂಡ ಅರವಿಂದ ದಳವಾಯಿ ಒತ್ತಾಯಿಸಿದರು.

ಇಲ್ಲಿನ ದಳವಾಯಿ ತೋಟದಲ್ಲಿ ನಡೆದ ಸಾವರಿನ್ ಶುಗರ್ಸ್‌ಗೆ ಕಬ್ಬು ಪೂರೈಸಿದ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾವರಿನ್ ಕಾರ್ಖಾನೆಯ ಚರಾಸ್ತಿ-ಸ್ಥಿರಾಸ್ತಿಗಳನ್ನು ಬ್ಯಾಂಕಿನವರು ವಶಪಡಿಸಿದ್ದಾರೆ. ರೈತರ ಕಬ್ಬಿನ ಬಾಕಿ ಹಣ ಪಾವತಿಸಿದ ಮೇಲೆ ಕಾರ್ಖಾನೆ ಆಸ್ತಿ ಹರಾಜು ಮಾಡಲು ಬಾಗಲಕೋಟೆ ಜಿಲ್ಲಾಧಿಕಾರಿ ಆದೇಶಿಸಿದರೂ ಬ್ಯಾಂಕ್‌ನವರು ಇದುವರೆಗೂ ರೈತರಿಗೆ ಬಾಕಿ ಹಣ ಪಾವತಿಸಿಲ್ಲ. ಇದನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ರೈತರಿಗೆ ನ್ಯಾಯ ದೊರೆಯಲು ವಿಳಂಬವಾದರೆ ಬೆಂಗಳೂರಿನ ಸಕ್ಕರೆ ಆಯುಕ್ತರ ಕಚೇರಿ ಮುಂದೆ ಸೆ.21ರಂದು ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ರೈತ ಮುಖಂಡರಾದ ಗಂಗಾಧರ ಮೇಟಿ, ಶ್ರೀಶೈಲ ಅಂಗಡಿ ಮಾತನಾಡಿದರು. ರೈತರಾದ ರಮಜಾನ್ ಹಕ್ಕಿ, ಸಿದ್ದಪ್ಪ ಸಣ್ಣಕ್ಕಿ, ಶಿವಪ್ಪ ಬಳೋಲದಾರ, ರಾಮಣ್ಣ ಗೂರನವರ ನೀಲಪ್ಪ ಯಲಿಗಾರ, ಈರಪ್ಪ ಸಸಾಲಟ್ಟಿ ಹಾಗೂ ಗೋಕಾಕ, ರಾಯಬಾಗ, ಮುಧೋಳ, ಜಮಖಂಡಿ ಮತ್ತು ಅಥಣಿ ಭಾಗದ ರೈತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು