ಶನಿವಾರ, ಸೆಪ್ಟೆಂಬರ್ 18, 2021
29 °C

ಅಪಾಯಕ್ಕೆ ಕಾದಿರುವ ರಸ್ತೆ: ದುರಸ್ತಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಗೋಕಾಕ ತಾಲ್ಲೂಕಿನ ಬಡಿಗವಾಡ, ದುರದುಂಡಿ, ಪಾಮಲದಿನ್ನಿ ಹಾಗೂ ಮಲ್ಲಾಪೂರ ಪಿ.ಜಿ. ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ, ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ನಾಲೆಯ ಸಮೀಪದ ರಸ್ತೆ ಕುಸಿದಿದೆ.

‘ನಾಲ್ಕು ತಿಂಗಳಿಂದಲೂ ದುರಸ್ತಿ ಆಗಿಲ್ಲ. ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ವಕೀಲ ಮಲ್ಲಿಕಾರ್ಜುನ ಚೌಕಶಿ ದೂರಿದ್ದಾರೆ.

‘107 ಕಿ.ಮೀ. ಉದ್ದದ ಘಟಪ್ರಭಾ ಎಡದಂಡೆ ಕಾಲುವೆಗೆ ಶನಿವಾರ 2,400 ಕ್ಯುಸೆಕ್‌ ನೀರು ಹರಿಬಿಡಲಾಗುತ್ತಿದ್ದು, ಎರಡು ಕಡೆಗಳಲ್ಲಿ (5ನೇ ಕಿ.ಮೀ. ಹಾಗೂ 7ನೇ ಕಿ.ಮೀ.) ನಾಲೆ ಪಕ್ಕದ ರಸ್ತೆ ಶಿಥಿಲಗೊಂಡಿದೆ. ಒಂದು ವೇಳೆ ಅದು ಒಡೆದರೆ ಹೊಲಗಳು ಮತ್ತು ಮನೆಗಳು ಮುಳುಗಿ ಜನರು ಬೀದಿಗೆ ಬೀಳುತ್ತಾರೆ. ಆ ರಸ್ತೆಯಲ್ಲಿ ನಿತ್ಯ ನೂರಾರು ರೈತರು ಸಂಚರಿಸುತ್ತಾರೆ. ಈಗ ಲಾಕ್‌ಡೌನ್ ಕಾರಣಕ್ಕೆ ಪೋಲಿಸರ ಕಣ್ಣು ತಪ್ಪಿಸಲು ಸಾಕಷ್ಟು ಜನ ಇದೇ ಮಾರ್ಗ ಅವಲಂಬಿಸಿದ್ದಾರೆ. ರಸ್ತೆ ಒಡೆದಿರುವ ಕುರಿತು ಯಾವುದೇ ಸೂಚನಾ ಫಲಕ ಹಾಕಿಲ್ಲ. ಬ್ಯಾರಿಕೇಡ್‌ ಕೂಡ ಇಟ್ಟಿಲ್ಲ. ಯಾರಾದರೂ ಅಪ್ಪಿತಪ್ಪಿ ಬಿದ್ದರೆ ಸಾವು ನಿಶ್ಚಿತ. ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು