ಕಾಗವಾಡ: ಕಳೆದ ಅನೇಕ ದಿನಗಳಿಂದ ನನೆಗುದಿಗೆ ಬಿದ್ದಿರುವ ತಾಲ್ಲೂಕಿನ ಜುಗೂಳ ಗ್ರಾಮದ ಪರಿಶಿಷ್ಟ ಜಾತಿಯ ಸ್ಮಶಾನ ಭೂಮಿ ವಿವಾದವನ್ನು ಕೂಡಲೇ ಪರಿಹರಿಸಬೇಕು. ಇಲ್ಲವಾದಲ್ಲಿ ಜೂನ್ 4ರಿಂದ ತಹಶೀಲ್ದಾರ್ ಕಾರ್ಯಾಲಯದ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಮಂಗಳವಾರ ಜುಗೂಳ ಗ್ರಾಮದ ದಲಿತ ಸಮುದಾಯದವರು, ದಲಿತ ಸಂಘರ್ಷ ಸಮಿತಿ (ಭೀಮವಾದ)ದ ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ್ ಶಿಂಗೆ ನೇತೃತ್ವದಲ್ಲಿ ತಹಶೀಲಾರ್ ರಾಜೇಶ ಬುರ್ಲಿ, ತಾ.ಪಂ. ಇಒ ವೀರಣ್ಣಾ ವಾಲಿ ಮತ್ತು ಕಾಗವಾಡ ಪೋಲಿಸ್ ಠಾಣೆಯ ಪಿಎಸ್ಐ ಅವರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.

ನಮ್ಮ ಸಮುದಾಯದ ಯಾರಾದರೂ ಮೃತಪಟ್ಟರೆ ಶಾಂತಿಯುತ ಅಂತ್ಯಕ್ರಿಯೆಗೆ ಅವಕಾಶ ಸಿಗದಿದ್ದರೆ ಜುಗೂಳ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಅಂತ್ಯಸಂಸ್ಕಾರ ನೆರೆವೇರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿ (ಭೀಮವಾದ)ದ ರಾಜ್ಯ ಸಂಘಟನಾ ಸಂಚಾಲಕ ಸಂಜು ಕಾಂಬಳೆ, ಜಿಲ್ಲಾ ಸಂಘಟನಾ ಸಂಚಾಲಕ ವೆಂಕಟೇಶ್ ಕಾಂಬಳೆ, ತಾಲೂಕಾ ಸಂಚಾಲಕ ವಿಶಾಲ್ ದೊಂಡಾರೆ, ಪ್ರಮೋದ್ ಕಾಂಬಳೆ, ರಾಹುಲ್ ಕಾಂಬಳೆ, ಜುಗೂಳ ಗ್ರಾಮದ ಮುಖಂಡರಾದ ಪ್ರತಾಪ್ ಕಾಂಬಳೆ, ಮಹಾದೇವ ಕಾಂಬಳೆ, ರವಿ ಐಹೊಳೆ, ದೀಪಕ್ ಪಾಖರೆ, ಅರ್ಜುನ್ ಅಧೋಕೆ, ತುಕಾರಾಮ ಕಾಂಬಳೆ, ಸಾಗರ ಕಾಂಬಳೆ, ನಾರಾಯಣ ಮಾನೆ, ಪೋಪಟ್ ಕಾಂಬಳೆ, ಗೋಪಾಲ ಕಾಂಬಳೆ, ವಿಜಯ್ ಹಿರೇಮಣ, ವಿದ್ಯಾಧರ್ ಕಾಂಬಳೆ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.