ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಗಳಿ | ದ್ರಾಕ್ಷಿ ಬೆಳೆಗಾರರ ಹಿತ ಕಾಯಲು ಆಗ್ರಹ

Published 4 ಡಿಸೆಂಬರ್ 2023, 7:36 IST
Last Updated 4 ಡಿಸೆಂಬರ್ 2023, 7:36 IST
ಅಕ್ಷರ ಗಾತ್ರ

ಐಗಳಿ: ‘ಸದ್ಯ ಹಸಿ ದ್ರಾಕ್ಷಿ ಕೆಜಿಗೆ ₹20, ಒಣ ದ್ರಾಕ್ಷಿ ₹120 ಮಾರಾಟವಾಗುತ್ತಿದೆ. ಇದರಿಂದ ದ್ರಾಕ್ಷಿ ಬೆಳೆ ರೈತನ ಜೀವನ ನಡೆಸುವುದು ಕಷ್ಟವಾಗಿದೆ. ಇದರ ಪರಿಹಾರಕ್ಕೆ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಯಾಗಬೇಕು’ ಎಂದು ಮಾಜಿ ಶಾಸಕ ಶಹಜಹಾನ್‌ ಡೊಂಗರಗಾಂವ ಹೇಳಿದರು.

ಸ್ಥಳೀಯ ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಥಣಿ ತಾಲ್ಲೂಕಿನ ಪೂರ್ವ ಭಾಗದಲ್ಲಿ ದ್ರಾಕ್ಷಿ ಬೆಳೆ ಪ್ರಮುಖವಾಗಿದೆ. ಕಡಿಮೆ ನೀರಿನಲ್ಲಿ ಒಳ್ಳೆಯ ಆದಾಯ ಬರಲಿದೆ ಎಂದು ರೈತರು ಸಾಲ ಮಾಡಿ ಉತ್ಪಾದನೆ ಹೆಚ್ಚಿಸಿಕೊಂಡಿದ್ದಾರೆ. ಅಧಿವೇಶನದಲ್ಲಿ ದ್ರಾಕ್ಷಿ ಬೆಳೆಗೆ ಉತ್ತಮ ಬೆಲೆ ನೀಡುವ ಸಂಬಂಧ ಚರ್ಚೆ ನಡೆಸಬೇಕು. ಹಾನಿ ಅನುಭವಿಸಿದ ದ್ರಾಕ್ಷಿ ಬೆಳೆಗಾರರಿಗೆ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಅಂಗನವಾಡಿ, ಪ್ರಾಥಮಿಕ ಶಾಲೆ, ವಸತಿ ನಿಲಯ, ವಸತಿ ಶಾಲೆ, ಆರೋಗ್ಯ ಪ್ರಾಥಮಿಕ ಕೇಂದ್ರಗಳಿಗೆ ಒಣದ್ರಾಕ್ಷಿ ನೀಡಬೇಕು. ಮೊಟ್ಟೆಯ ಬದಲಾಗಿ ಒಣದ್ರಾಕ್ಷಿ ವಿತರಿಸಿದರೆ ಮಕ್ಕಳ ಆರೋಗ್ಯ, ರೋಗಿಗಳ ಆರೋಗ್ಯವೂ ಸುಧಾರಿಸುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲೇ ನಿರ್ಧಾರ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

ರೈತರಾದ ಅಪ್ಪಾಸಾಬ ಪಾಟೀಲ, ಅಪ್ಪಾಸಾಬ ಮಾಕಾಣಿ, ದಸ್ತಗೀರಸಾಬ ಕೊರಬು, ಜಗದೀಶ ತೆಲಸಂಗ, ಈರಗೌಡ ಪಾಟೀಲ, ಪ್ರಲ್ಹಾದ್‌ ಪಾಟೀಲ, ಲಕ್ಷ್ಮಣ ತೆಲಸಂಗ, ಸೇರಿದಂತೆ ಅನೇಕ ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT