ಶುಕ್ರವಾರ, ಅಕ್ಟೋಬರ್ 30, 2020
24 °C

ಸಂಶೋಧನಾ ಪ್ರಬಂಧ‌ ಮಂಡನೆ ಪ್ರಶಸ್ತಿಗೆ ಡಾ.ಸುನೀಲ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಪ್ರಸಕ್ತ ಸಾಲಿನ ಸಂಶೋಧನಾ ಪ್ರಬಂಧ‌ ಮಂಡನೆ ಪ್ರಶಸ್ತಿಗೆ ಇಲ್ಲಿನ ಕೆಎಲ್ಇ ಉನ್ನತ ಶಿಕ್ಷಣ ಸಂಸ್ಥೆಯ ಕೆಎಲ್‌‌ಇ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಸುನೀಲ್ ಜಲಾಲಪುರೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ₹25ಸಾವಿರ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಕ್ಷೇತ್ರಗಳ ಬೋಧಕ ಸಿಬ್ಬಂದಿ ಪ್ರೋತ್ಸಾಹಿಸಲು ಈ ಪ್ರಶಸ್ತಿ ನೀಡಲಾಗುತ್ತದೆ.

‘ಬೋಧನೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ 22 ವರ್ಷಗಳ ಅನುಭವ ಹೊಂದಿರುವ ಜಲಾಲಪುರೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ 118 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, 80 ಪ್ರಬಂಧಗಳನ್ನು ಸಮಾವೇಶಗಳಲ್ಲಿ ಮಂಡಿಸಿದ್ದಾರೆ. ಸಂಶೋಧನಾ ಯೋಜನೆಗಳಿಗಾಗಿ ಯುಜಿಸಿ‌, ಎಐಸಿಟಿಇ, ಡಿಎಸ್‌ಟಿ ಮತ್ತು ಐಸಿಎಂಆರ್‌ನಿಂದ ₹ 1 ಕೋಟಿವರೆಗೆ ಧನಸಹಾಯ ಪಡೆದಿದ್ದಾರೆ. ಅವರನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮತ್ತು ಕುಲಪತಿ ಡಾ.ವಿವೇಲ್ ಸಾವೊಜಿ ಅಭಿನಂದಿಸಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.