ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅ.15ರಿಂದ ಹುಕ್ಕೇರಿ ಹಿರೇಮಠದ ದಸರಾ ಉತ್ಸವ

Published : 4 ಸೆಪ್ಟೆಂಬರ್ 2023, 14:08 IST
Last Updated : 4 ಸೆಪ್ಟೆಂಬರ್ 2023, 14:08 IST
ಫಾಲೋ ಮಾಡಿ
Comments

ಹುಕ್ಕೇರಿ: ಹಿರೇಮಠದ ದಸರಾ ಉತ್ಸವವನ್ನು ಅ.15ರಿಂದ 24ರ ವರೆಗೆ ವಿಜೃಂಭಣೆಯಿಂದ ಆಚರಿಸಲು ಸಕಲ ಸದ್ಭಕ್ತರು ಸಹಕರಿಬೇಕು ಎಂದು ಉತ್ಸವ ಸಮಿತಿ ಅಧ್ಯಕ್ಷರೂ ಆದ, ಶಾಸಕ ನಿಖಿಲ್ ಕತ್ತಿ ಹೇಳಿದರು.

ಪಟ್ಟಣದ ಹಿರೇಮಠದಲ್ಲಿ ಸೋಮವಾರ ನಡೆದ ‘ಹಿರೇಮಠಧ ದಸರಾ ಉತ್ಸವ–2023’ ಭಿತ್ತಿಪತ್ರ ಬಿಡುಗಡೆ ಮತ್ತು ಮಠದ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ, ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಸೇರಿದಂತೆ ನಾಡಿನ ಗಣ್ಯಮಾನ್ಯರು ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಕತ್ತಿ ತಿಳಿಸಿದರು.

ರೇಣುಕ ಶ್ರೀ: ಸಮಾಜಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ‘ರೇಣುಕ ಶ್ರೀ’ ಪ್ರಶಸ್ತಿಯನ್ನು ಈ ವರ್ಷ ನೊಣವಿನಕರೆ ಸೋಮಕಟ್ಟೆ ಕಾಡಸಿದ್ಧೇಶ್ವರ ಪೀಠಾಧ್ಯಕ್ಷ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿ ಫಲಕದ ಜತೆ ₹1ಲಕ್ಷ ನಗದು ಬಹುಮಾನ ಕೂಡಾ ಕೊಡಲಾಗುವುದು ಎಂದು ಸಭೆಗೆ ತಿಳಿಸಿದರು.

ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ಮಾತನಾಡಿದರು.

ಇದಕ್ಕೂ ಮೊದಲು ನಿವೃತ್ತ ಶಿಕ್ಷಕ ಎಸ್.ಐ.ಸಂಬಾಳ, ತುಬಚಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಿಂಟು ಶೆಟ್ಟಿ, ಪುರಸಭೆ ಸದಸ್ಯ ರಾಜು ಮುನ್ನೋಳಿ, ಮುಖಂಡ ಶಿವರಾಜ ನಾಯಿಕ, ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ್ ಅಭಿಪ್ರಾಯ ತಿಳಿಸಿದರು.

ಭಕ್ತರಾದ ರೀಡ್ಸ್ ಸಂಸ್ಥೆಯ ಅಧ್ಯಕ್ಷ ಅಶೋಕ ಪಾಟೀಲ, ಚನ್ನಪ್ಪ ಗಜಬರ್, ಸುರೇಶ್ ಜಿನರಾಳಿ, ನಿವೃತ್ತ ಮುಖ್ಯ ಶಿಕ್ಷಕ ಬಿ.ಎಸ್.ಮುನ್ನೋಳಿ, ಅಣ್ಣಪ್ಪ ಸಂಬಾಳ, ನೀಲಪ್ಪ ಕೋಳಿ, ಬಸವರಾಜ ನಾಯಿಕ, ತಮ್ಮಣಗೌಡ ಪಾಟೀಲ ಇದ್ದರು. ಸುರೇಶ್ ಜಿನರಾಳಿ ಸ್ವಾಗತಿಸಿ, ವಂದಿಸಿದರು.

ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಅ.15 ರಿಂದ 24ರ ವರೆಗೆ (9 ದಿನ) ಸೋಮವಾರ ಕರೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ ಅವರನ್ನು ಚಂದ್ರಶೇಖರ್ ಸ್ವಾಮೀಜಿ ಸತ್ಕರಿಸಿದರು.
ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಅ.15 ರಿಂದ 24ರ ವರೆಗೆ (9 ದಿನ) ಸೋಮವಾರ ಕರೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ನಿಖಿಲ್ ಕತ್ತಿ ಅವರನ್ನು ಚಂದ್ರಶೇಖರ್ ಸ್ವಾಮೀಜಿ ಸತ್ಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT