ಶುಕ್ರವಾರ, ಸೆಪ್ಟೆಂಬರ್ 25, 2020
24 °C

ಶಿಕ್ಷಣದಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ: ಲತಾ ಕಿತ್ತೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜೀವನದ ಸುಖಕ್ಕೆ ಶಿಕ್ಷಣವೇ ಮೂಲ. ಬದುಕಿನ ಎಲ್ಲ ಸಮಸ್ಯೆಗಳನ್ನೂ ಆ ಜ್ಞಾನದ ಬೆಳಕು ಪರಿಹರಿಸಬಲ್ಲದು’ ಎಂದು ಎಸ್.ಕೆ.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ಲತಾ ಕಿತ್ತೂರ ಹೇಳಿದರು.

ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ಗುರುವಾರ ನಡೆದ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಾಳಿಗೆ ಬೆಳಕು ತೋರಿದ ಮಹನೀಯರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ-ಪರಂಪರೆಯ ಒಂದು ಭಾಗವಾಗಿದೆ’ ಎಂದರು.

ಆರ್‌ಪಿಡಿ ಕಾಲೇಜಿನ ಆಡಳಿತ ನಿರ್ವಹಣಾ ಮಂಡಳಿ ಉಪಾಧ್ಯಕ್ಷೆ ಬಿಂಬಾ ನಾಡಕರ್ಣಿ, ಎಸ್.ಕೆ.ಇ. ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ಬಿ. ದೇಶಪಾಂಡೆ, ಆಡಳಿತ ಮಂಡಳಿ ಸದಸ್ಯರಾದ ಪ್ರೊ.ಎಸ್.ವೈ. ಪ್ರಭು ಮತ್ತು ಜ್ಞಾನೇಶ ಕಲಘಟಗಿ ರಾಣಿ ಪಾರ್ವತಿ ದೇವಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಪ್ರೊ.ಪ್ರಾಚಿ ಹಲಗೇಕರ ಪ್ರಾರ್ಥಿಸಿದರು, ಪ್ರೊ.ಪ್ರಸನ್ನ ಜೋಶಿ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು