ಬೆಳಗಾವಿ: ಬೆಂಗಳೂರಿನ ಖಾಸಗಿ ಕಂಪನಿಯ ಕಟ್ಟಡದಲ್ಲಿ ಬಾಂಬ್ ಇಟ್ಟಿದ್ದಾಗಿ ಹುಸಿ ಕರೆ ಮಾಡಿದ ಆರೋಪದ ಮೇರೆಗೆ ಬೆಳಗಾವಿಯ ಯುವತಿಯನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಇಲ್ಲಿನ ಶಾಹೂ ನಗರದಲ್ಲಿರುವ ಯುವತಿ ನಿವಾಸಕ್ಕೆ ಬಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸರು ದೀರ್ಘ ವಿಚಾರಣೆ ಮಾಡಿದರು.
ಪಿಎಸ್ಐ ಮೆಹಬೂಬ್ ಹಾಗೂ ಮಹಿಳಾ ಪೊಲೀಸ್ ಕಾನ್ ಸ್ಟೆಬಲ್ ಅವರಿಗೆ ಬೆಳಗಾವಿ ಎಪಿಎಂಸಿ ಠಾಣೆ ಸಿಪಿಐ, ಪಿಎಸ್ಐ ಸೇರಿ ಸಾಥ್ ನೀಡಿದರು ಮೂಲಗಳು ತಿಳಿಸಿವೆ.