ಬೈಲಹೊಂಗಲ: ಕಳಪೆ ಬೀಜ, ಕೀಟನಾಶಕದಿಂದ ಪ್ರಸಕ್ತ ಹಂಗಾಮಿನ ಸೋಯಾಬಿನ್, ಹೆಸರು, ಹತ್ತಿ ಮತ್ತು ಉದ್ದು ಸೇರಿದಂತೆ ವಿವಿಧ ತರಹದ ಬೆಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪದಾಧಿಕಾರಿಗಳು ರಾಜ್ಯ ಘಟಕದ ಅಧ್ಯಕ್ಷ ಬಿ.ಎ.ಲಕ್ಷ್ಮೀನಾರಾಯಣಗೌಡ ಅವರ ಆದೇಶ ಪ್ರಕಾರ ರಾಜ್ಯ ಉಪಾಧ್ಯಕ್ಷ ಬಸವರಾಜ ಬೆಳ್ಳಿಕಟ್ಟಿ ಅವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ, ಚನ್ನಮ್ಮನ ಕಿತ್ತೂರು, ಗೋಕಾಕ ಹಾಗೂ ರಾಮದುರ್ಗ ತಾಲ್ಲೂಕಿನಾದ್ಯಂತ ಬೆಳೆ ಸಂಪೂರ್ಣ ಹಾಳಾಗಿವೆ. ಇದಕ್ಕೆ ಕಳಪೆ ಬೀಜ, ಕಳಪೆ ಕೀಟನಾಶಕ ಕಾರಣವಾಗಿದ್ದು ಸುಮಾರು 4 ರಿಂದ 5 ಬಾರಿ ಔಷದ ಸಿಂಪಡಣೆ ಮಾಡಿದರೂ ಪ್ರಯೋಜನವಾಗಿಲ್ಲ. ಒಂದು ಎಕರೆ ಬೆಳೆಯಲು ಸುಮಾರು ₹40ಸಾವಿರದಿಂದ ₹50ಸಾವಿರದವರೆಗೆ ಬೀಜ, ಔಷಧಕ್ಕೆ ಖರ್ಚು ಮಾಡಲಾಗಿದ್ದು ಪ್ರಯೋಜನ ಆಗಿಲ್ಲಶ್ರ. ಕೂಡಲೇ ಸರ್ಕಾರ ರೈತರ ಹಿತ ದೃಷ್ಟಿಯಿಂದ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸಂಘಟಣೆ ಉತ್ತರ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ಪಡಸಲಗಿ, ಜಿಲ್ಲಾ ಘಟಕದ ಅಧ್ಯಕ್ಷ ಈರಪ್ಪ ಹುಬ್ಬಳ್ಳಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಸಿದ್ದರಾಯ ಕಳ್ಳಿಮನಿ, ಸವದತ್ತಿ ತಾಲ್ಲೂಕು ಗೌರವಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಸಾಳುಂಕೆ, ಯರಗಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ರಾಯಪ್ಪ ಮಳಗಲಿ, ಮಹಾದೇವ ಕಲಭಾಂವಿ, ರೈತ ಧುರೀಣ ಶ್ರೀಶೈಲ ಕೋಟಗಿ, ಗಂಗಪ್ಪ ನಾಶಿಪುಡಿ, ಸುರೇಶ ತೋಟಗಿ, ಅದೃಶ್ಯ ಬೆಳ್ಳಿಕಟ್ಟಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.