ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಗಟ್ಟಿ: ರೈತ ಹುತಾತ್ಮ ದಿನಾಚರಣೆ 21ರಂದು

Last Updated 5 ಜುಲೈ 2021, 14:44 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆಯಿತು.

ಜುಲೈ 21ರಂದು ರೈತ ಹುತ್ಮಾತ ದಿನಾಚರಣೆ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಯರಗಟ್ಟಿಯಲ್ಲಿ ನಡೆಸಲು ನಿರ್ಧರಿಸಲಾಯಿತು.

‘ಕೃಷಿ ಇಲಾಖೆಯು ಕೃಷಿ ಉಪಕರಣಗಳಿಗೆ ನೀಡುತ್ತಿದ್ದ ಸಹಾಯಧನ ಪುನರಾರಂಭಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ತ್ರಿಫೇಸ್ ವಿದ್ಯುತ್ ಅನ್ನು ನಿತ್ಯ 8 ಗಂಟೆ ನೀಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ವಿವಿಧ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು. 2019ರಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ ಪರಿಹಾರ ಕೊಡಬೇಕು. ಕಬ್ಬಿನ ಬಿಲ್ ಕೊಡಿಸಬೇಕು’ ಎಂದು ಒತ್ತಾಯಿಸಲಾಯಿತು.

ರಾಜ್ಯ ಘಟಕದ ಕಾರ್ಯದರ್ಶಿ ಭೀಮಶಿ ಗದಾಡಿ, ರಾಜ್ಯ ಸಮಿತಿ ಸದಸ್ಯ ಗಣಪತಿ ಈಳಿಗೇರ, ಜಿಲ್ಲಾ ಸಮಿತಿಯ ರಮೇಶ ಮಡಿವಾಳ, ಮುತ್ತೆಪ್ಪ ಕುರಬರ, ಭೀಮಶಿ ಹುಲಗುಂದ, ಶಿವು ಪಾಟೀಲ, ಬಾಳಯ್ಯ ಹಿರೇಮಠ, ಬಾಬು ಹಿರೇಮಠ, ತ್ಯಾಗರಾಜ ಕದಮ್, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಮುತ್ತೆಪ್ಪ ಬಾಗನ್ನವರ, ಪ್ರಕಾಶ ಹಾಲನ್ನವರ, ಮಲಿಕಸಾಬ ಜಮಾದಾರ, ಸುಲೇಮಾನ ಗಾಣಿಗೇರ, ರಂಗಪ್ಪ ಪಾಂಡರೆ, ಮಂಜುನಾಥ ಪಾಟೀಲ, ರವಿ ಪಂಟೆಕರ, ಮಹಾದೇವ ಮಡಿವಾಳ, ಪಾರೀಶ ಯಳಗೂಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT