ಗುರುವಾರ , ಮೇ 19, 2022
24 °C

ಪೋಸ್ಟ್‌ಮನ್‌ಗಳಿಗೆ ಅಭಿನಂದನಾ ಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಗಳಖೋಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ 8 ಮಂದಿ ಪೋಸ್ಟ್‌ಮನ್‌ಗಳಿಗೆ ಯುವಾ ಬ್ರಿಗೇಡ್‌ ಮುಖಂಡರು ಜಾಕೆಟ್ ಮತ್ತು ಕಿಂದರಿಜೋಗಿ  ಅಭಿನಂದನಾ ಪತ್ರಗಳನ್ನು ನೀಡಿ ಇಲ್ಲಿನ ಅಂಚೆ ಕಚೇರಿಯಲ್ಲಿ ಭಾನುವಾರ ಸತ್ಕರಿಸಿದರು.

‘ಕೊರೊನಾದಿಂದಾಗಿ ಲಾಕ್‌ಡೌನ್ ಆಗಿದ್ದಾಗಲೂ ಪೋಸ್ಟ್‌ಮನ್‌ಗಳು ರಸ್ತೆಗಿಳಿದು ಕೆಲಸ ಮಾಡಿದರು. ಪತ್ರಗಳಷ್ಟೆ ಅಲ್ಲ ಔಷಧಿಯನ್ನೂ ಮನೆಗಳಿಗೆ ಮುಟ್ಟಿಸಿದ್ದಾರೆ. ಆದ್ದರಿಂದ ಅವರೂ ಕೊರೊನಾ ಸೇನಾನಿಗಳೆ. ಅವರನ್ನು ಅಭಿನಂದಿಸುವುದಕ್ಕಾಗಿ ಯುವಾ ಬ್ರಿಗೇಡ್ ಫೆ.14ನ್ನು ‘ಭಾವನೆಗಳ ಕಿಂದರಿಜೋಗಿ’ ಎಂಬ ಕಾರ್ಯಕ್ರಮ ನಡೆಸುತ್ತಿದೆ’ ಎಂದು ಕಾರ್ಯಕರ್ತ ಭೀರಪ್ಪ ಹುನ್ನೂರ ಹೇಳಿದರು.

ಶ್ರೀಕಾಂತ ಖೇತಗೌಡರ, ಅಜಯ ತೇರದಾಳ, ಸಿದ್ದು ಯರಡತ್ತಿ, ಮಹಾಂತೇಶ ಬಡಿಗೇರ, ಸಂತೋಷ ಮುಗಳಿ, ಮಹಾದೇವ ಪಣದಿ ಹಾಗೂ ಅಂಚೆ ಇಲಾಖೆ ಸಿಬ್ಬಂದಿ ಲಕ್ಕಪ್ಪ ಕೋರೆ, ಶ್ರೀಧರ ಪತ್ತಾರ, ನಾಗಪ್ಪ ಕರಿಭೀಮಗೋಳ, ಚೇತನ ಮೋರೆ, ಬಸವರಾಜ ಪಾಟೀಲ, ಸವಿತಾ ಬಡಿಗೇರ, ಸುವರ್ಣಾ ದೊಡ್ಡಮನಿ  ಮತ್ತು ಪೂಜಾ ಪಣದಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು