ಬೆಳಗಾವಿ: ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ)ಯಲ್ಲಿ 720ಕ್ಕೆ 705 ಅಂಕಗಳನ್ನು ಗಳಿಸಿ 103ನೇ ರ‍್ಯಾಂಕ್ ಪಡೆದಿರುವ ರೋಶ್ನಿ ತೀರ್ಥಹಳ್ಳಿ ಮತ್ತು 691 ಅಂಕ (384ನೇ ರ‍್ಯಾಂಕ್) ಗಳಿಸಿರುವ ಮಹಮ್ಮದ್ ಕೈಫ್ ಮುಲ್ಲಾ ಅವರನ್ನು ಇಲ್ಲಿನ ಆಕಾಶ್ ಸಂಸ್ಥೆಯವರು ಮಂಗಳವಾರ ಅಭಿನಂದಿಸಿದರು.

ಸಂಸ್ಥೆಯ ರಸಾಯನವಿಜ್ಞಾನದ ಉಪನ್ಯಾಸಕ ಎ.ಹರಿಕೃಷ್ಣನ್ ಅವರು ಅಭಿನಂದಿಸಿದರು. ನಂತರ ಮಾತನಾಡಿ, ‘ದೇಶದಾದ್ಯಂತ 16ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಹಾಜರಾಗಿದ್ದರು. ಈ ಪೈಕಿ ರೋಶ್ನಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಪೋಷಕರು ಮತ್ತು ನಮ್ಮ ಸಂಸ್ಥೆಗೂ ಗೌರವ ತಂದುಕೊಟ್ಟಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು.

‘ಅವರು ವಿಶ್ವದ ಅತ್ಯಂತ ಕಠಿಣ ಪರೀಕ್ಷೆ ಎಂದೇ ಪರಿಗಣಿಸಲಾದ ಎನ್‌ಇಇಟಿಗೆ ಸಿದ್ಧತೆ ಮಾಡಿಕೊಳ್ಳಲು ಆಕಾಶ್ ಸಂಸ್ಥೆಯಲ್ಲಿ 2 ವರ್ಷಗಳ ತರಗತಿ ಕಾರ್ಯಕ್ರಮಕ್ಕೆ ಸೇರ್ಪಡೆಯಾಗಿದ್ದರು. ಉತ್ತಮ ಜ್ಞಾನಾರ್ಜನೆಯ ಮೂಲಕ ಎನ್‌ಇಇಟಿಯಲ್ಲಿನ ಟಾಪರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪೋಷಕರ ಸಂಪೂರ್ಣ ಬೆಂಬಲವೂ ಸಾಧನೆಗೆ ಕಾರಣವಾಗಿದೆ’ ಎಂದರು.

‘ನಾನು ಇಷ್ಟು ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಲು ಕಾರಣವಾದ ಆಕಾಶ್ ಸಂಸ್ಥೆಗೆ ಆಭಾರಿಯಾಗಿದ್ದೇನೆ. ಸಂಸ್ಥೆಯವರು ನೀಡಿದ ಪಠ್ಯಗಳು ಮತ್ತು ತರಬೇತಿ ಇಲ್ಲದಿದ್ದರೆ ಟಾಪರ್ ಆಗಲಾಗುತ್ತಿರಲಿಲ್ಲ ’ ಎಂದು ರೋಶ್ನಿ ಪ್ರತಿಕ್ರಿಯಿಸಿದರು.

ವಿದ್ಯಾರ್ಥಿಗಳ ಪೋಷಕರು ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.