ಹುಕ್ಕೇರಿ: ತಾಲ್ಲೂಕಿನ ಅಮ್ಮಣಗಿ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ‘ಬನ್ನಿ ಮುಡಿಯುವ’ ಕಾರ್ಯಕ್ರಮ ವಿಧಿವತ್ತಾಗಿ ನಡೆಯಿತು.
ದಸರಾ ಹಬ್ಬದ 9ನೇ ದಿನದಂದು ಗ್ರಾಮದಿಂದ ದೇವರ ಉತ್ಸವ ಮೂರ್ತಿ ಸಮೇತ ಪಲ್ಲಕ್ಕಿಯು ದೇವಸ್ಥಾನಕ್ಕೆ ಆಗಮಿಸಿತು. ಭಕ್ತರು ಕುದುರೆ, ನಂದಿ ಕೋಲು, ಪಲ್ಲಕ್ಕಿ, ಕರಡಿ ಮಜಲು ಸಮೇತ ಮಲ್ಲಿಕಾರ್ಜುನ ದೇವರಿಗೆ ಎರಡು ಸುತ್ತು ಪ್ರದಕ್ಷಣೆ ಹಾಕಿದರು. ಬಳಿಕ ಪಲ್ಲಕ್ಕಿಯು ದೇವಸ್ಥಾನದ ಹೊರಗೆ ಬನ್ನಿ ಮಂಟಪಕ್ಕೆ ಆಗಮಿಸಿ ಐದು ಸುತ್ತು ಪ್ರದಕ್ಷಿಣೆ ಹಾಕಿತು. ಗ್ರಾಮದ ಶ್ಯಾಮರಾವ್ ಇನಾಂದಾರ್ ನೇತೃತ್ವದಲ್ಲಿ ಬನ್ನಿ ಮುಡಿಯಲಾಯಿತು. ಎಲ್ಲ ಭಕ್ತರು ಭಕ್ತಿಯಿಂದ ಬನ್ನಿ ಪಡೆದು ದೇವರಿಗೆ ಸಮರ್ಪಿಸಿ ಗ್ರಾಮಕ್ಕೆ ತೆರಳಿ ತಮ್ಮ ತಮ್ಮೊಳಗೆ ಬನ್ನಿ ವಿನಿಮಯ ಮಾಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.