ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಮ್ಮನ ಕಿತ್ತೂರು | ನಕಲಿ ವೈದ್ಯ: ಪ್ರಕರಣ ದಾಖಲು

Published 14 ಜೂನ್ 2024, 19:33 IST
Last Updated 14 ಜೂನ್ 2024, 19:33 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಶಿಶು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬೆಳಗಾವಿ ಪೊಲೀಸರಿಂದ ಬಂಧಿತನಾಗಿರುವ ಇಲ್ಲಿಯ ಸೋಮವಾರಪೇಟೆಯ ಅಬ್ದುಲ್ ಗಫಾರ್ ಲಾಡಖಾನ್ ವಿರುದ್ಧ ಕಿತ್ತೂರು ಪೊಲೀಸ್ ಠಾಣೆಯಲ್ಲೂ ಗುರುವಾರ ಪ್ರಕರಣ ದಾಖಲಾಗಿದೆ.

‘ಅಧಿಕೃತ ವೈದ್ಯಕೀಯ ಪದವಿ ದಾಖಲಾತಿ ಪಡೆಯದೆ ಅಲೋಪಥಿ ವೈದ್ಯ ಪದ್ಧತಿ ಪ್ರಕಾರ ವೈದ್ಯ ವೃತ್ತಿ ಮಾಡುತ್ತಿದ್ದ.  ತನ್ನ ಬೆಂಬಲಿಗರ ಜತೆ ಸೇರಿ ಅಕ್ರಮವಾಗಿ ಗರ್ಭಪಾತ ಮಾಡಿಸುತ್ತಿದ್ದು, ಅದನ್ನು ಕಿತ್ತೂರು-ತಿಗಡೊಳ್ಳಿ ಮಾರ್ಗದಲ್ಲಿ ಬರುವ ತೋಟದಲ್ಲಿ ಮುಚ್ಚಿ ಹಾಕಿ ನಾಶ ಪಡಿಸುತ್ತಿದ್ದ’ ಎಂದು ಆರೋಪಿಸಿ ತಾಲ್ಲೂಕು ವೈದ್ಯಾಧಿಕಾರಿ ಸಂಜಯ ಸಿದ್ದಣ್ಣವರ ಕಿತ್ತೂರು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಡಿಎಸ್ಪಿ ಭೇಟಿ: ತಾಲ್ಲೂಕು ವೈದ್ಯಾಧಿಕಾರಿ ದೂರಿನ ಮೇರೆಗೆ ತಿಗಡೊಳ್ಳಿ ರಸ್ತೆಯಲ್ಲಿರುವ ತೋಟಕ್ಕೆ ಡಿವೈಎಸ್ಪಿ ರವಿ ನಾಯಕ ಶುಕ್ರವಾರ ಭೇಟಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT