ಗುರುವಾರ , ಜೂನ್ 30, 2022
25 °C

ಹರ್ಷಿಕಾ, ಭುವನ್‌ರಿಂದ ದಿನಸಿ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಭುವನಂ ಸಂಸ್ಥೆಯ ರಾಯಬಾರಿಗಳಾದ ಚಿತ್ರ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರು ಜಿಲ್ಲೆಯ ರಾಯಬಾಗ ತಾಲ್ಲೂಕಿನ ಸವಸುದ್ದಿ ಗ್ರಾಮದಲ್ಲಿ ಕೋವಿಡ್ ಜಾಗೃತಿಗಾಗಿ ‘ಉಷಾರ್’ ಅಭಿಯಾನ ನಡೆಸಿದರು.

ಆ ಗ್ರಾಮದಲ್ಲಿ ತಿಂಗಳಲ್ಲಿ ಹಲವು ಮಂದಿ ಸಾವಿಗೀಡಾಗಿದ್ದನ್ನು ತಿಳಿದು, ಜನರನ್ನು ಭೇಟಿಯಾಗಿ ಅವರ ತೊಂದರೆಗಳನ್ನು ಆಲಿಸಿದರು. ಕೊರೊನಾಪೀಡಿತ 50 ಕುಟುಂಬಗಳ ಮನೆಗಳಿಗೆ ತೆರಳಿ ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳು, ದಿನಸಿ, ಔಷಧಿ ಮತ್ತು ಮಾಸ್ಕ್‌ಗಳುಳ್ಳ ಕಿಟ್‌ಗಳನ್ನು ವಿತರಿಸಿದರು.

ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು