ಬೆಳಗಾವಿ: ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಮಂಗಳವಾರ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು, 6 ಪ್ರತ್ಯೇಕ ಪ್ರಕರಣಗಳಲ್ಲಿ 13 ಜನರನ್ನು ಬಂಧಿಸಿದ್ದಾರೆ.

ಎಪಿಎಂಸಿ ಬಳಿಯ ಸ್ಥಳದಲ್ಲಿ ಕಂಗ್ರಾಳಿ ಕೆ.ಎಚ್. ಗ್ರಾಮದ ವಿನಾಯಕ ನಿಂಗಪ್ಪ ನಾಯಿಕ(46) ಎಂಬಾತನನ್ನು ಬಂಧಿಸಿ, ₹260 ವಶಕ್ಕೆ ಪಡೆದಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂಡಲಗಾ ಬಳಿ ಬಾಕ್ಸೈಟ್ ರಸ್ತೆಯಲ್ಲಿ ಹಿಂಡಲಗಾದ ಶಾಮ ಗುಲಬಾನಿ, ಮನೋಜ ಕಾಂಬಳೆ ಅವರನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, ₹1,220 ನಗದು ವಶಪಡಿಸಿಕೊಂಡಿದ್ದಾರೆ.

ಗಾಂಧಿ ನಗರದ ಬಂಟರ ಭವನ ಎದುರಿನ ರಸ್ತೆಯಲ್ಲಿ ಗಾಂಧಿ ನಗರದ ಇಮ್ತಿಯಾಜ್ ಮಿರ್ಜಾ, ಜಾವೇದ್ ಶೇಖ್ ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿ, ₹1,500 ನಗದು ವಶಕ್ಕೆ ಪಡೆದಿದ್ದಾರೆ.

ಆಟೋ ನಗರದಲ್ಲಿ ಕಣಬರ್ಗಿಯ ಲಕ್ಷ್ಮಣ ನಾಯಿಕ, ಪರುಶರಾಮ ಅವರನ್ನು ಬಂಧಿಸಿ, ₹1,420 ವಶಪಡಿಸಿಕೊಂಡಿದ್ದಾರೆ. ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಂಜರ್ ಗಲ್ಲಿಯಲ್ಲಿ ಖಂಜರ್ ಗಲ್ಲಿಯ ಮೊಹಮ್ಮದ್ಶಫಿ ತಹಶೀಲ್ದಾರ್ ಎಂಬಾತನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ, ₹4,750 ವಶಕ್ಕೆ ಪಡೆದಿದ್ದಾರೆ.

ಹಳೇ ಬೆಳಗಾವಿಯ ಸ್ಮಶಾನಭೂಮಿ ಬಳಿ ನವೀನ ಪಾಟೀಲ, ಗೌತಮ ಜೈನ, ಪ್ರಥಮೇಶ ಯಾದವ, ದಯಾನಂದ ಧಾಮನೇಕರ, ದೀಪಕ ಮುದಕನ್ನವರ ಅವರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿ, ₹4,150 ವಶಪಡಿಸಿಕೊಂಡಿದ್ದಾರೆ.

ಗಾಂಜಾ ಮಾರಾಟ: ಮಹಿಳೆ ಬಂಧನ

ಗ್ಯಾಂಗವಾಡಿಯಲ್ಲಿ ಗಾಂಜಾ ಮಾರುತ್ತಿದ್ದ ಸುಮನ ವಿಕ್ರಾಂತ ದಿಡೆ(23) ಎಂಬ ಮಹಿಳೆಯನ್ನು ನಗರ ಸಿಇಎನ್ ಅಪರಾಧ ಠಾಣೆ ಪೊಲೀಸರು ಬಂಧಿಸಿ, ₹8 ಸಾವಿರ ಮೌಲ್ಯದ 30 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.