ಬುಧವಾರ, ಜುಲೈ 6, 2022
22 °C

ಒಳ್ಳೆಯ ಯೋಜನೆ: ಕುಮಠಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ವಿವಿಧ ಸೇವೆಗಳನ್ನ ಪಡೆಯಲು ರೈತರು ಅಲೆದಾಡುವುದು, ಸಮಯ ವ್ಯರ್ಥವಾಗುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರವು ಒಳ್ಳೆಯ ಯೋಜೆನೆಯನ್ನು ರೂಪಿಸಿದೆ. ಕಂದಾಯ ದಾಖಲೆಗಳನ್ನು ಮನೆಗಳಿಗೆ ನೇರವಾಗಿ ತಲುಪಿಸಲಿದೆ’ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

ಸಮೀಪದ ದರೂರ ಹಾಗೂ ದೊಡವಾಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಗ್ರಾಮ್ ಒನ್ ಕೇಂದ್ರ ಹಾಗೂ ಸತ್ತಿ ಗ್ರಾಮದಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖಂಡರಾದ ರಮೇಶಗೌಡಾ ಪಾಟೀಲ, ಎ.ಎ. ಹುದ್ದಾರ, ಬಿ.ಟಿ. ಪಾಟೀಲ, ನಿಂಗಪ್ಪ ನಂದೇಶ್ವರ,‌  ತಹಶೀಲ್ದಾರ್‌ ದುಂಡಪ್ಪ ಕೋಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು