ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಗ್ರಾ.ಪಂ. ಚುನಾವಣೆಯಲ್ಲಿ 25.70 ಲಕ್ಷ ಮತದಾರರು

ಅಂತಿಮ ಮತದಾರರ ಪಟ್ಟಿ ಪ್ರಕಟ
Last Updated 4 ಸೆಪ್ಟೆಂಬರ್ 2020, 8:39 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮುಂಬರುವ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯಲ್ಲಿ 13.07 ಲಕ್ಷ ಪುರುಷರು ಹಾಗೂ 12.62 ಲಕ್ಷ ಮಹಿಳೆಯರು ಸೇರಿ ಒಟ್ಟು 25.70 ಲಕ್ಷ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

ಜಿಲ್ಲೆಯಲ್ಲಿ 506 ಗ್ರಾಮ ಪಂಚಾಯಿತಿಗಳಿವೆ. ಇವುಗಳಲ್ಲಿ 2020ರ ಡಿಸೆಂಬರ್‌ವರೆಗೆ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳ ಅಂತಿಮ ಮತದಾರರ ಪಟ್ಟಿಯನ್ನು (ಆ.31ರಲ್ಲಿ ಇದ್ದಂತೆ) ಪ್ರಕಟಿಸಲಾಗಿದೆ. ಪ್ರಸ್ತುತ, ಡಿಸೆಂಬರ್‌ವರೆಗೆ ಅವಧಿ ಅಂತ್ಯವಾಗುವ 484 ಪಂಚಾಯಿತಿಗಳ ಅಂಕಿ ಅಂಶವನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಡಿಸೆಂಬರ್‌ ನಂತರ ಅವಧಿ ಮುಕ್ತಾಯವಾಗುವ 22 ಗ್ರಾಮ ಪಂಚಾಯಿತಿಗಳ ಮತದಾರರ ಸಂಖ್ಯೆಯನ್ನು ಪಟ್ಟಿಯಲ್ಲಿ ಸೇರಿಸಿಲ್ಲ.

ಸಾವಿರಕ್ಕಿಂತ ಹೆಚ್ಚಿರುವವರು:

ಅವಧಿ ಮುಗಿದಿರುವ ಹಾಗೂ ಮುಗಿಯಲಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶನ ನೀಡಿತ್ತು. ಕಳೆದ ವರ್ಷದ ಆಗಸ್ಟ್‌ನಲ್ಲಿ ಮರಡು ಮತದಾರರ ಪಟ್ಟಿ ತಯಾರಿಸಿ ಸಾರ್ವಜನಿಕರು ಹಾಗೂ ಮತದಾರರ ಆಕ್ಷೇಪಣೆಗಳಿಗೆ ಅವಕಾಶ ಕೊಟ್ಟಿತ್ತು. ಈಗ, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.

ಪಟ್ಟಿಯಲ್ಲಿ 2,937 ಭಾಗಗಳಿದ್ದು, 2,937 ಮತಗಟ್ಟೆಗಳಿವೆ. ಇತರೆ ಮತದಾರರು ಪಟ್ಟಿಯಲ್ಲಿಲ್ಲ. 1000ಕ್ಕಿಂತ ಹೆಚ್ಚಿನ ಮತದಾರರಿರುವ ಒಟ್ಟು ಭಾಗಗಳ ಸಂಖ್ಯೆ 912 ಆಗಿದೆ. ಈ ಪೈಕಿ ಬೆಳಗಾವಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 142 ಭಾಗಗಳಿವೆ. ಹುಕ್ಕೇರಿ (120) ನಂತರದ ಸ್ಥಾನದಲ್ಲಿದೆ.

ಪ್ರಮುಖ ಚುನಾವಣೆ:

‘ಸ್ಥಳೀಯ ಸರ್ಕಾರವಾದ ಪಂಚಾಯಿತಿ ಚುನಾವಣೆಯು ಮುಂದೆ ಎದುರಾಗಲಿರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಿಗೆ ಸೆಮಿಫೈನಲ್‌ ಎಂದೇ ಬಿಂಬಿತವಾಗಿದೆ. ಈ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳು ರಾಜಕೀಯ ಪಕ್ಷಗಳ ಟಿಕೆಟ್‌ ಮೇಲೆ ಸ್ಪರ್ಧಿಸುವುದಿಲ್ಲ. ಆದರೆ, ಬೆಂಬಲಿಗರು ಕಣಕ್ಕಿಳಿಯುತ್ತಾರೆ. ಸ್ಥಳೀಯ ಪಕ್ಷಗಳ ಮುಖಂಡರು ತಮ್ಮ ಕಾರ್ಯಕರ್ತರು ಅಥವಾ ಬೆಂಬಲಿಗರನ್ನು ಬೆಂಬಲಿಸುತ್ತಾರೆ. ಸಂಘಟನೆಯನ್ನು ತಳಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಅತ್ಯಂತ ಮಹತ್ವದ್ದು ಹಾಗೂ ಪ್ರತಿಷ್ಠೆಯಿಂದ ಕೂಡಿರುವುದೂ ಆಗಿದೆ. ಮುಂದೆ ರಾಜಕೀಯದಲ್ಲಿ ಬೆಳೆಯಬೇಕು ಎಂದುಕೊಂಡವರು ಇಲ್ಲಿ ಪೈಪೋಟಿಗಿಳಿಯುತ್ತಾರೆ. ರಾಜಕಾರಣಿಗಳು ಮತ್ತು ಪ್ರಭಾವಿಗಳು ತಮ್ಮ ಮಕ್ಕಳು ಅಥವಾ ಸಂಬಂಧಿಕರನ್ನು ಮುನ್ನೆಲೆಗೆ ತರಲು ಇದನ್ನು ಬಳಸಿಕೊಳ್ಳುತ್ತಾರೆ’ ಎನ್ನುತ್ತಾರೆ ರಾಜಕೀಯ ಪಕ್ಷಗಳ ಮುಖಂಡರು.

ಡಿಸೆಂಬರ್‌ ನಂತರ ಅವಧಿ ಮುಕ್ತಾಯವಾಗುವ ಗ್ರಾಮ ಪಂಚಾಯಿತಿಗಳು

ಬೆಳಗಾವಿ ತಾಲ್ಲೂಕಿನ ಬಿಜಗರ್ಣಿ, ಬೆಳವಟ್ಟಿ, ಬೈಲಹೊಂಗಲದ ದೊಡವಾಡ, ರಾಮದುರ್ಗದ ತುರನೂರ, ಹಲಗತ್ತಿ, ಮುದೇನೂರ, ಓಬಳಾಪುರ, ಸವದತ್ತಿ ತಾಲ್ಲೂಕಿನ ಹೊಸೂರ, ಯಕ್ಕುಂಡಿ, ಮಲ್ಲೂರ, ಬಡ್ಲಿ, ಗೋಕಾಕದ ತಳಕಟನಾಳ, ರಾಯಬಾಗದ ಸಿದ್ದಾಪೂರ, ಯಲ್ಪಾರಟ್ಟಿ, ಯಡ್ರಾಂವ, ಜಲಲಾಪುರ, ಮಂಟೂರ, ಅಥಣಿಯ ತೆಲಸಂಗ, ಸವದಿ, ನಂದೇಶ್ವರ, ದರೂರ ಹಾಗೂ ಮಹಿಷವಾಡಗಿ.

***

ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಕ್ರಿಯೆ ನಡೆದಿದೆ. ತಹಶೀಲ್ದಾರ್‌ಗಳ ಕಾರ್ಯಾಲಯ, ಗ್ರಾಮ ಪಂಚಾಯಿತಿಗಳಲ್ಲಿ ಪರಿಶೀಲನೆಗಾಗಿ ಪಟ್ಟಿ ಲಭ್ಯವಿದೆ. ಮತದಾರರು ತಮ್ಮ ಹೆಸರಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು
ಎಂ.ಜಿ. ಹಿರೇಮಠ
ಜಿಲ್ಲಾಧಿಕಾರಿ

***

ತಾಲ್ಲೂಕುವಾರು ಮತದಾರರ ಪಟ್ಟಿ

ತಾಲ್ಲೂಕು;ಗ್ರಾ.ಪಂ.;ಮತಗಟ್ಟೆ;ಪುರುಷರು;ಮಹಿಳೆಯರು;ಒಟ್ಟು

ಬೆಳಗಾವಿ;57,385;1,80,226;1,74,159;3,54,585

ಖಾನಾಪುರ;51;231;99,762;92,817;1,92,579

ಹುಕ್ಕೇರಿ;52;272;1,30,691;1,30,536;2,61,227

ಬೈಲಹೊಂಗಲ;33;189;80,345;78,464;1,58,809

ಕಿತ್ತೂರ;16;89;36,122;34,314;70,436

ರಾಮದುರ್ಗ;33;201;80,845;77,828;1,58,673

ಸವದತ್ತಿ;41;251;1,02,726;1,01,257;2,03,983

ಗೋಕಾಕ;35;259;1,04,305;1,05,015;2,09,320

ಮೂಡಲಗಿ;20;112;50,601;50,035;1,00,636

ಚಿಕ್ಕೋಡಿ;36;240;1,08,464;1,04,415;2,12,879

ನಿಪ್ಪಾಣಿ;27;180;78,403;75,085;1,53,488

ರಾಯಬಾಗ;33;187;98,299;92,587;1,90,886

ಅಥಣಿ;41;258;1,19,617;1,10,861;2,30,478

ಕಾಗವಾಡ;9;83;37,540;35,507;73,011

ಒಟ್ಟು;484;2937;13,07,910;12,62,880;25,70,790

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT