ಬುಧವಾರ, ಮೇ 27, 2020
27 °C

ಸಮೂಹ ನೃತ್ಯ: ಕೊಳವಿ ಶಾಲೆ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯಿಂದ ‘ವಾರಾಂತ್ಯ ಕಾರ್ಯಕ್ರಮ’ದಲ್ಲಿ ಹುಕ್ಕೇರಿ ತಾಲ್ಲೂಕು ಯರಗಟ್ಟಿಯ ಬಸವೇಶ್ವರ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ ಶಾಲಾ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಗೋಕಾಕ ತಾಲ್ಲೂಕಿನ ಕೊಳವಿಯ ಸರ್ಕಾರಿ ಪ್ರಾಥಮಿಕ ಶಾಲಾ ತಂಡದವರು ಪ್ರಥಮ ಬಹುಮಾನ ಗೆದ್ದರು.

ಜಿಲ್ಲೆಯ ವಿವಿಧ 10 ಶಾಲಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು, ದ್ವಿತೀಯ ಬಹುಮಾನವನ್ನು ಹೊಸೂರದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕೊಳವಿಯ ಸರ್ಕಾರಿ ಪ್ರಾಥಮಿಕ ಶಾಲಾ ತಂಡ, ತೃತೀಯ ಬಹುಮಾನವನ್ನು ಯರಗಟ್ಟಿಯ ಕರ್ನಾಟಕ ಪಬ್ಲಿಕ ಶಾಲೆ ಮತ್ತು ಹೊಸೂರದ ಸರ್ಕಾರಿ ಪ್ರೌಢಶಾಲೆ ತಂಡಗಳು (ಜಂಟಿಯಾಗಿ) ಪಡೆದುಕೊಂಡವು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ₹ 3ಸಾವಿರ, ದ್ವಿತೀಯ ₹ 2 ಸಾವಿರ ಹಾಗೂ ₹ 1ಸಾವಿರ ಬಹುಮಾನ ನೀಡಲಾಯಿತು.

ಯರಗಟ್ಟಿಯ ಹಿರಿಯರಾದ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಮುಖಂಡರಾದ ಹುಸೇನ ಮುಲ್ಲಾ, ವಿರೂಪಾಕ್ಷಿ ಚೌಗಲಾ, ಚಂದ್ರಶೇಖರ ಪಾಟೀಲ, ಮಲ್ಲಿಕಾರ್ಜುನ ನಂದಗಾವಿ, ಕಿರಣ ಚೌಗಲಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು