ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಈಚೆಗೆ ಭರತ ಹುಣ್ಣಿಮೆ ಜಾತ್ರೆಗೆ ಸೇರಿದ ಜನಸ್ತೋಮ
ಕ್ಯಾಂಪಿಲೊಬ್ಯಾಕ್ಟರ್ ಜೆಜುನಿ ಎಂಬ ರೋಗಕಾರಕ ಬ್ಯಾಕ್ಟೀರಿಯಾದಿಂದ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಈ ಬ್ಯಾಕ್ಟೀರಿಯಾ ಕೋಳಿಗಳಲ್ಲಿ ಕಂಡುಬರುತ್ತದೆ. ಆಹಾರ ಮತ್ತು ನೀರಿನಿಂದ ಬರುವ ಕಾಯಿಲೆಯಾಗಿದೆ. ಜಿಲ್ಲೆಯಲ್ಲಿ ಪ್ರಕರಣ ಕಂಡುಬಂದಿಲ್ಲ.
–ರಾಹುಲ್ ಶಿಂಧೆ ಸಿಇಒ ಜಿಲ್ಲಾ ಪಂಚಾಯಿತಿ
ಇದು ಅಪಾಯಕಾರಿ ಕಾಯಿಲೆ ಅಲ್ಲ. ಆದರೆ ಈ ರೋಗಕ್ಕೆ ನಿರ್ದಿಷ್ಟ ಔಷಧ ಇಲ್ಲ. ಜನ ಆದಷ್ಟು ಎಚ್ಚರಿಕೆಯಿಂದ ಇರಬೇಕು. ಲಕ್ಷಣಗಳು ಕಂಡುಬಂದರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ತೋರಿಸಿಕೊಳ್ಳಬೇಕು. ಯಲ್ಲಮ್ಮನಗುಡ್ಡ ಚಿಂಚಲಿ ಜಾತ್ರೆಗೆ ಬರುವ ಮಹಾರಾಷ್ಟ್ರದ ಭಕ್ತರ ಮೇಲೆ ನಿಗಾ ಇಡಲಾಗಿದೆ. ಲಕ್ಷಣಗಳು ಕಂಡುಬಂದರೆ ತಪಾಸಣೆಗೆ ಒಳಪಡಿಸಲಾಗುವುದು.
–ಡಾ.ಈಶ್ವರ ಗಡಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಸಂಪೂರ್ಣ ಗುಣಮುಖ ಸಾಧ್ಯ
ಜಿಬಿಎಸ್ ಅಂಟುರೋಗವಲ್ಲ. ಸಂಪೂರ್ಣ ಗುಣಮುಖ ಮಾಡಲು ಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ಪ್ಲಾಸ್ಮಾ ಚಿಕಿತ್ಸೆ ನೀಡಿ ಹಾನಿಕಾರಕ ಪ್ರತಿಕಾಯಗಳನ್ನು ತೆಗೆದು ಹಾಕಬಹುದು. ‘ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್’ ಎಂಬ ವಿಶೇಷ ಚಿಕಿತ್ಸೆಯೂ ಲಭ್ಯವಿದೆ. ಶುದ್ಧ ನೀರು ಹಾಗೂ ಸುರಕ್ಷಿತ ಆಹಾರ ಸೇವನೆ ಮಾಡುವ ಮೂಲಕ ಇದರಿಂದ ದೂರ ಇರಬಹುದು. ಊಟಕ್ಕೂ ಮುನ್ನ ಶೌಚಾಲಯಕ್ಕೆ ಹೋಗಿ ಬಂದ ಮೇಲೆ ಹೊರಗಿನಿಂದ ಬಂದ ತಕ್ಷಣ ಸೋಪು ಹಾಕಿ ಕೈ ತೊಳೆಯುವ ರೂಢಿ ಒಳ್ಳೆಯದು ಎಂದು ಡಾ.ಈಶ್ವರ ಗಡಾದ ಸಲಹೆ ನೀಡಿದ್ದಾರೆ.
ಮಹಾರಾಷ್ಟ್ರದ ಬಾವಿಯಲ್ಲಿ ಹುಟ್ಟಿತ್ತು
ಪುಣೆಯ ನಾಂದೇಡ್ ಸೋಂಕಿನ ಕೇಂದ್ರಸ್ಥಳ. ಇಲ್ಲಿನ ಒಂದು ಬಾವಿಯಲ್ಲಿ ಕಲುಷಿತ ನೀರಿನಲ್ಲಿ ಈ ಬ್ಯಾಕ್ಟೀರಿಯಾ ಹುಟ್ಟಿಕೊಂಡಿತು. ಸೋಂಕಿತರ ಮನೆಗಳಿಗೆ ಪೂರೈಕೆಯಾಗುತ್ತಿರುವ ನೀರನ್ನು ಪರೀಕ್ಷೆ ಮಾಡಿದಾಗ ಸೋಂಕಿತರ ಪೈಕಿ 26 ಮಂದಿಯ ಮನೆಗಳ ನೀರಿನಲ್ಲಿ ಕ್ಲೋರಿನ್ ಇರಲಿಲ್ಲ ಎನ್ನುವ ಅಂಶ ಪತ್ತೆಯಾಗಿದೆ. ಹೀಗಾಗಿ ಹೆಚ್ಚು ಕ್ಲೋರಿನೇಷನ್ ಮಾಡುವ ಕ್ರಮ ವಹಿಸಲಾಗಿದೆ.