ರಾಮದುರ್ಗ: ವಿದ್ಯಾರ್ಥಿಗಳ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಸಂಘಟಿಸಲು ಸರಿಯಾದ ಕಟ್ಟಡ ನಿರ್ಮಾಣದ ಉದ್ದೇಶದಿಂದ ₹1.20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ‘ಗುರುಭವನ’ ನಿರ್ಮಾಣಗೊಂಡಿದ್ದು, ಜುಲೈ 12ರಂದು ಇಲ್ಲಿನ ವಿದ್ಯಾಚೇತನ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ.

ತಾಲ್ಲೂಕಿನ ಎಲ್ಲ ಶಾಲಾ ಶಿಕ್ಷಕರ ಸಾಂಸ್ಕೃತಿಕ ಕೇಂದ್ರವಾಗಿಯೂ ಇದು ಕಾರ್ಯನಿರ್ವಹಿಸಲಿದೆ. ಮಕ್ಕಳ ಕಾರ್ಯಕ್ರಮಗಳು, ಶಿಕ್ಷಕರ ದಿನಾಚರಣೆ, ಸಭೆ, ಸಮಾರಂಭ ಮತ್ತು ಸಾರ್ವಜನಿಕ ಉದ್ದೇಶಗಳ ಈಡೇರಿಕೆಗೆ ಮುಖ್ಯ ವೇದಿಕೆಯಾಗಿ ಗುರುಭವನ ಕಾರ್ಯ ನಿರ್ವಹಿಸಲಿದೆ.

ಸರ್ಕಾರದ ಅನುದಾನವನ್ನು ಬಳಸಿಕೊಳ್ಳದೇ ಕೇವಲ ಶಿಕ್ಷಕರ ವಂತಿಕೆ, ಶಿಕ್ಷಕರ ಕ್ಷೇಮಾವೃದ್ಧಿ ಸಂಘದ ನಿಧಿಯಿಂದ ₹35 ಲಕ್ಷ ಸಹಾಯಧನದಿಂದ ಈ ಗುರುಭವನ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿ ಆಕರ್ಷಣೆಯ ಕೇಂದ್ರವಾಗಿದೆ. ಸಭೆ, ಸಮಾರಂಭಗಳನ್ನು ಮಾಡಲು ಶಿಕ್ಷಕರು ಅನುಭವಿಸುತ್ತಿದ್ದ ಕಷ್ಟಗಳನ್ನು ಅರಿತು ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ದಿಸೆಯಲ್ಲಿ ಗುರುಭವನ ನಿರ್ಮಾಣಗೊಂಡಿದೆ.

ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಶನಿವಾರ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷೆ ಸರಿತಾ ಧೂತ್, ಡಿಡಿಪಿಐ ಲೀಲಾವತಿ ಹಿರೇಮಠ, ಡಯಟ್ ಉಪನಿರ್ದೇಶಕ ಬಸವರಾಜ ನಲವತವಾಡ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಗುರುಭವನದಿಂದ ತಾಲ್ಲೂಕಿನ ಶಿಕ್ಷಕರ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಪ್ರಾಮಾಣಿಕತೆಯಿಂದ ಇಷ್ಟು ದೊಡ್ಡ ಮಟ್ಟದ ದೇಣಿಗೆ ಸಂಗ್ರಹ ಸಾಧ್ಯವಾಗಿದೆ
ಆರ್.ಟಿ. ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮದುರ್ಗ

ಏನೇನಿದೆ ಭವನದಲ್ಲಿ?:

ರಾಮದುರ್ಗ ತಾಲ್ಲೂಕಿನ ಪ್ರಾಥಮಿಕ ಪ್ರೌಢಶಾಲೆಗಳ ವಿವಿಧ ವೃಂದಗಳ ಶಿಕ್ಷಕರು ನಿವೃತ್ತ ಶಿಕ್ಷಕರು ಒಟ್ಟು ₹48 ಲಕ್ಷಕ್ಕೂ ಹೆಚ್ಚಿನ ದೇಣಿಗೆ ನೀಡಿದ್ದಾರೆ. ₹19 ಲಕ್ಷಗಳ ವಿವಿಧ ಪರಿಕರಗಳನ್ನು ಶಿಕ್ಷಕರು ಮತ್ತು ಅವರ ಸಂಘಟನೆಗಳು ದೇಣಿಗೆ ನೀಡಿವೆ. ಶಿಕ್ಷಕರ ಕೂಡಿಟ್ಟ ಸ್ವಲ್ಪ ಹಣವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿಯೇ ಕೇವಲ 8 ತಿಂಗಳ ಅವಧಿಯಲ್ಲಿ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿರುವ ಜಿಲ್ಲೆಯ ಮೂರನೇಯ ಗುರುಭವನ ಇದಾಗಿದೆ. ಎರಡು ವಸ್ತ್ರಾಲಂಕಾರ ಕೊಠಡಿ ಮುಖ್ಯ ವೇದಿಕೆ ವಿಐಪಿ ಖುರ್ಚಿಗಳು 1000 ಪ್ಲಾಸ್ಟಿಕ್ ಖುರ್ಚಿಗಳು ಟೇಬಲ್ ವಾಲ್ಫ್ಯಾನ್ ಸೀಲಿಂಗ್ ಫ್ಯಾನ್ ಆಕರ್ಷಕ ಆಲಂಕಾರಿಕ ದೀಪಗಳು ಬೆಳಕಿನ ದೀಪಗಳು ಡಯಾಸ್ ಸೇರಿದಂತೆ ವಿವಿಧ ಪರಿಕರಗಳು ಇಲ್ಲಿವೆ. ಒಟ್ಟು 40 ಅಡಿ ಅಗಲ 100 ಅಡಿ ಉದ್ದದ ವಿಸ್ತರಣದಲ್ಲಿ ಗುರುಭವನ ಕಟ್ಟಲಾಗಿದೆ. ಇದಕ್ಕೆ ಒಟ್ಟು ₹88 ಲಕ್ಷದಲ್ಲಿ ಕಟ್ಟಡ ಉಳಿದ ₹42 ಲಕ್ಷದಲ್ಲಿ ವಿವಿಧ ಪರಿಕರಗಳನ್ನು ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.