ಮಂಗಳವಾರ, ಅಕ್ಟೋಬರ್ 27, 2020
24 °C

ಜಾನುವಾರು ಹುಲ್ಲುಗಾವಲಿಗೆ ಜಾಗ: ಹಲಗಾ ಗ್ರಾಮಸ್ಥರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ತಾಲ್ಲೂಕಿನ ಸುವರ್ಣ ವಿಧಾನಸೌಧದ ಸಮೀಪದಲ್ಲಿರುವ ಹಲಗಾ ಗ್ರಾಮದಲ್ಲಿ ಜಾನುವಾರುಗೆ ಹುಲ್ಲುಗಾವಲುಗಾಗಿ ಏಳು ಏಕರೆ ಜಾಗ ನೀಡಬೇಕು ಮತ್ತು ಪಶು ಆಸ್ಪತ್ರೆ ಮಂಜೂರು ಮಾಡಬೇಕು’ ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಹೈನುಗಾರಿಕೆ ಮತ್ತು ಕೃಷಿಯನ್ನು ಅವಲಂಬಿಸಿ ನಾವು ಜೀವನ ನಡೆಸುತ್ತಿದ್ದೇವೆ. ಸದ್ಯ ದನ, ಎಮ್ಮೆ, ಕರುಗಳನ್ನು ಮೇಯಿಸುವುದಕ್ಕೆ ನಿರ್ದಿಷ್ಟ ಜಾಗವಿಲ್ಲದೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜಾಗ ನೀಡಿ ಅಲ್ಲಿ ಹುಲ್ಲುಗಾವಲು ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಕೋರಿದರು.

‘ಗ್ರಾಮದ ಸರ್ವೇ ‘ನಂ.262/ಎ’ಯಲ್ಲಿ ಗಾಯರಾಣ ಜಮೀನನ್ನು ಕೆಲವು ಸಂಘ ಸಂಸ್ಥೆಗಳಿಗೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸುವರ್ಣಸೌಧದ ಸಮೀಪದಲ್ಲಿರುವ ಈ ಭೂಮಿಯನ್ನು ಕಬಳಿಸಲು ಕೆಲವರು ಹೊಂಚು ಹಾಕುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ಗ್ರಾಮಸ್ಥರ ಅನುಕೂಲಕ್ಕಾಗಿ ಜಮೀನು ನೀಡಬೇಕು’ ಎಂದು ಒತ್ತಾಯಿಸಿದರು.

ವಕೀಲ ಅಣ್ಣಾಸಾಹೇಬ ಘೋರ್ಪಡೆ, ವೈ.ಕೆ. ದಿವಟೆ, ಬಸಯ್ಯ ಹಿರೇಮಠ, ಮಹಾವೀರ ಬೆಲ್ಲದ, ಕೆ.ಕೆ. ಸಂತಾಜಿ, ಚಂದ್ರು ಕಾಮೋಜಿ, ಪ್ರಕಾಶ ಲೋಹಾರ, ಕಿರಣ ಹನುಮಂತಾಚೆ, ಮಹಾವೀರ ಪಾಟೀಲ, ದೀಪಕ ಕಾಮನಾಚೆ, ಪ್ರಫುಲ್ಲ ಮಾಸ್ತಮರ್ಡಿ, ಶಿವಕುಮಾರ ಹುಡೇದ, ಬಾಬು ಧಾಮಣೆಕರ, ಪರಶುರಾಮ ಬಸ್ತವಾಡಕರ, ಕಾಚು ಸಾವಂತ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.