ಮಂಗಳವಾರ, ಜೂನ್ 15, 2021
21 °C

ರಾಮದುರ್ಗ: ಹಸಿದವರಿಗೆ ಅನ್ನ ನೀಡುವ ಉದ್ಯಮಿ

ಚನ್ನಪ್ಪ ಮಾದರ Updated:

ಅಕ್ಷರ ಗಾತ್ರ : | |

Prajavani

ರಾಮದುರ್ಗ (ಬೆಳಗಾವಿ ಜಿಲ್ಲೆ): ಕೋವಿಡ್‌ನ ಎರಡನೇ ಅಲೆಯಿಂದ ಲಾಕ್‌ಡೌನ್‌ ವಿಧಿಸಲಾಗಿದೆ. ಹಳ್ಳಿಗಳಿಂದ ಬರುವ ರೈತರು, ಬಡವರು ಮತ್ತು ಬೆಳಗಿನ ಉಪಹಾರ ಮುಗಿಸಿಕೊಂಡು ಕರ್ತವ್ಯಕ್ಕೆ ಮುಂದಾಗುವ ಬಹುತೇಕ ಸರ್ಕಾರಿ ನೌಕರರು ಮಧ್ಯಾಹ್ನದ ಊಟದ ವ್ಯವಸ್ಥೆ ಇಲ್ಲದೇ ಕಂಗಾಗಿದ್ದಾರೆ. ಹೋಟೆಲ್‌ಗಳು ಮುಚ್ಚಿರುವುದರಿಂದಾಗಿ ಊಟಕ್ಕಾಗಿ ಪರದಾಡುತ್ತಿದ್ದಾರೆ. ಅವರಿಗೆ ಉದ್ಯಮಿ ಚಿಕ್ಕ ರೇವಣ್ಣ ಅವರು ತಮ್ಮ ಅಭಿಮಾನಿಗಳ ಮುಖಾಂತರ ‘ಹಸಿದವರಿಗೆ ಅನ್ನ’ ಕಾರ್ಯಕ್ರಮದ ಮೂಲಕ ನೆರವಾಗುತ್ತಿದ್ದಾರೆ.

ಪಟ್ಟಣದಲ್ಲಿ ಬಡವರು, ರೈತರು, ಪೊಲೀಸರು, ಆರೋಗ್ಯ ಸಿಬ್ಬಂದಿ ಮತ್ತು ಕೊರೊನಾ ಯೋಧರಿಗೆ ಮಧ್ಯಾಹ್ನದ ಊಟದ ಡಬ್ಬಿ, ನೀರಿನ ಬಾಟಲಿ, ಮಾಸ್ಕ್‌ ವಿತರಿಸುತ್ತಿದ್ದಾರೆ. ಹುತಾತ್ಮ ಚೌಕ, ಪೊಲೀಸ್‌ ಮೈದಾನ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಕ್ಕುವ ಬಡವರು, ನಿರ್ಗತಿಕರು ಅಥವಾ ಕೊರೊನಾ ಯೋಧರಿಗೆ ನೀಡುತ್ತಿದ್ದಾರೆ. ಹಳ್ಳಿಗಳಿಗೂ ವಿತರಣೆ ವಿಸ್ತರಿಸಲಾಗಿದೆ.

ಹತ್ತು ದಿನಗಳಿಂದ ಈ ಕೆಲಸ ನಡೆಯುತ್ತಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜಕೀಯ ನಾಯಕರು, ಅಧಿಕಾರಿಗಳು ಲಾಕ್‌ಡೌನ್‌ ಮಾಡುವಲ್ಲಿ ಮಾತ್ರ  ನಿರತರಾಗಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲದ ಬಡವರ ಬಗ್ಗೆ ಚಿಂತಿಸುತ್ತಿಲ್ಲ. ಉದ್ಯಮಿ ಚಿಕ್ಕರೇವಣ್ಣ ಅವರು ಬಡವರ ನೆರವಿಗೆ ನಿಂತಿರುವುದು ಅಭಿನಂದನಾರ್ಹ ಎನ್ನುತ್ತಾರೆ ಜನರು.

ಚಿಕ್ಕರೇವಣ್ಣ ಅವರ ಆಪ್ತಸಹಾಯಕ, ಉದಗಟ್ಟಿ, ಮಹಾಳಿಂಗರಾಯ, ಬಿ.ಆರ್‌. ದೊಡಮನಿ, ಬಸಪ್ಪ ಶೇಡಬಾಳ, ಸುಮಿತ್ರಾ ಹನಮನೇರಿ, ಮಂಜು ನರನೂರ ಇತರರು ರೇವಣ್ಣ ಅವರ ಮಾರ್ಗದರ್ಶನದಲ್ಲಿ ಉಪಚಾರದಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿದ್ದಾರೆ.

‘ಕೋವಿಡ್ ಲಾಕ್‌ಡೌನ್‌ನಲ್ಲಿ ಬಡವರಿಗೆ ಊಟದ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ಅರಿತ ಉದ್ಯಮಿ ಚಿಕ್ಕರೇವಣ್ಣ ಅವರು ಊಟ, ನೀರು ವಿತರಣೆಗೆ ಸೂಚನೆ ನೀಡಿದ್ದಾರೆ. ಅದರಂತೆ ನಾವು ಅಳಿಲು ಸೇವೆ ಮಾಡುತ್ತಿದ್ದೇವೆ’ ಎಂದು ಅವರ ಆಪ್ತಸಹಾಯಕ ಮಹಾಳಿಂಗರಾಯ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು