ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ 

ಸಮಾಜದ ಹಿತ ಕಾಯುವ ಕಾರ್ಯ ಮಾಡಲು ಸಲಹೆ
Last Updated 28 ಮೇ 2022, 3:57 IST
ಅಕ್ಷರ ಗಾತ್ರ

ಮೂಡಲಗಿ: ‘ರಡ್ಡಿ ಸಮುದಾಯದ ಜನರು ದೇವಸ್ಥಾನದ ಜೊತೆಗೆ ಶಾಲೆ, ವಿದ್ಯಾರ್ಥಿಗಳ ವಸತಿ ನಿಲಯ ಮತ್ತು ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ಸಮಗ್ರ ಸಮಾಜದ ಹಿತಕಾಯಬೇಕು’ ಎಂದು ಶಾಸಕ ರಾಮಲಿಂಗಾರಡ್ಡಿ ಅವರು ಹೇಳಿದರು.

ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ, ಕಳಸಾರೋಹ ಸಮಾರಂಭದಲ್ಲಿ ಮಾತನಾಡಿದ ಅವರು, ರಡ್ಡಿ ಸಮಾಜಕ್ಕೆ ದೊರಕಬೇಕಾದ ಸೌಲಭ್ಯ, ಅವಕಾಶಗಳ ಪಡೆಯುವ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಒಗ್ಗಟ್ಟಿನ ಮೂಲಕ ಮಾಡಬೇಕು ಎಂದರು.

ಪ್ರಥಮ ಬಾರಿ ಶಾಸಕನಾದಾಗ ರಡ್ಡಿ ಸಮಾಜವನ್ನು ಕಟ್ಟಿ ಬೆಳೆಸುವ ಸಂಕಲ್ಪ ಮಾಡಿದ್ದೆ, ಸದ್ಯ ಆರನೇ ಬಾರಿ ಶಾಸಕನಾಗಿ ಆಯ್ಕೆಯಾಗಿ ಸಮಾಜವನ್ನು ಒಂದೂಗೂಡಿಸುವ ಮತ್ತು ಸಂಘಟಿಸುವಲ್ಲಿ ಯಶಸ್ಸು ಸಾಧಿಸಿರುವ ತೃಪ್ತಿ ಇದೆ. ಬೆಂಗಳೂರಿನಲ್ಲಿ ಈ ಹಿಂದೆ ರಡ್ಡಿ ಬೃಹತ್‌ ಸಮಾವೇಶ ಯಶಸ್ಸಿಗೊಳಿಸಲಾಯಿತು. ಮುಂದಿನ ಸಮಾವೇಶವನ್ನು ಉತ್ತರ ಕರ್ನಾಟಕದ ವಿಜಯಪುರ ಇಲ್ಲವೆ ಬಾಗಲಕೋಟೆದಲ್ಲಿ ಆಯೋಜಿಸಲಾಗುವುದು ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮಳು ಇಡೀ ನಾರಿ ಸಮುದಾಯಕ್ಕೆ ಆದರ್ಶ. ಅವರ ಆದರ್ಶ ಹಾಗೂ ತತ್ವಗಳು ಸರ್ವಕಾಲಿಕವಾಗಿ ಮೌಲಿಕವಾಗಿವೆ ಎಂದರು.

ಬೆಂಗಳೂರಿನ ರಡ್ಡಿ ಜನಸಂಘದ ನಿರ್ದೇಶಕ ಶೇಖರಡ್ಡಿ, ನವಲಗುಂದದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಸವದತ್ತಿ ಮಾಜಿ ಶಾಸಕ ಆರ್.ವಿ. ಪಾಟೀಲ, ಸರ್ವೋತ್ತಮ ಜಾರಕಿಹೊಳಿ ಮಾತನಾಡಿದರು. ಸಾನ್ನಿಧ್ಯವಹಿಸಿದ್ದ ಎರೆಹೊಸಳ್ಳಿ ಮಹಾಯೋಗಿ ವೇಮನ ರಡ್ಡಿ ಸಂಸ್ಥಾನ ಮಠದ ವೇಮಾನಾನಂದ ಸ್ವಾಮೀಜಿ, ಕಕಮರಿಯ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾರಾಜರು, ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಅರವಿಂದ ದಳವಾಯಿ, ಭೀಮಪ್ಪ ಗಡಾದ, ಡಾ.ಗಿರೀಶ ಸೋನವಾಲ್ಕರ, ಲಕ್ಷ್ಮಣ ದೇವರು, ಡಾ.ಕೆ.ವಿ.ಪಾಟೀಲ, ಜ್ಞಾನೇಶ ಮೇಲಪ್ಪಗೋಳ, ಸುರೇಶ ಯರಡ್ಡಿ, ಶಿವನಗೌಡ ಪಾಟೀಲ, ಎ.ಎಸ್.ಪಾಟೀಲ, ವಿಜಯ ಸೋನವಾಲ್ಕರ, ಅಶೋಕ ನಾಯಿಕ, ಗೋವಿಂದ ಕೊಪ್ಪದ, ಕೇಶವ ದೇವಾಂಗ, ದೇವರಾಜ ಹಾಗೂ ಯಶೋಧಾ ಒಂಟಗೋಡಿ, ರವೀಂದ್ರ ಹಕಾಟಿ, ಬಿ.ಜಿ.ಗೌಡಪ್ಪಗೋಳ, ಗೋಪಾಲ ಸಂಶಿ, ಗೋವಿಂದಗೌಡ ಪಾಟೀಲ, ಮಲ್ಲಮ್ಮ ಮೂರ್ತಿ ಮತ್ತು ಕಳಸ ದಾನಿಗಳಾದ ರುಕ್ಕವ್ವ ರಂಗಪ್ಪ ಕೊಳಿಗುಡ್ಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT