ಬೆಳಗಾವಿ: ಇಲ್ಲಿನ ಆರ್.ಪಿ.ಡಿ. ಕಾಲೇಜಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಹೆರಿಟೇಜ್ 2020’ ಯುವಜನೋತ್ಸವದಲ್ಲಿ ಕೆ.ಎಲ್.ಇ. ಸಿಬಾಲ್ಕ್ ಕಾಲೇಜು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ. ಎಸ್.ಕೆ.ಇ. ಸಂಸ್ಥೆಯ ಜಿ.ಎಸ್.ಎಸ್. ಪದವಿ ಕಾಲೇಜು ರನ್ನರ್‌ಅಪ್ ಸ್ಥಾನ ಗಳಿಸಿದೆ.

ಎರಡು ದಿನಗಳ ಕಾಲ ನಡೆದ ‘ಚಾಣಕ್ಯ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಖುಷಿ ಮೆಹ್ತಾ ಹಾಗೂ ದ್ವಿತೀಯ ಬಹುಮಾನವನ್ನು ಮೆಹಕ ಸನದಿ ಹಾಗೂ ತೃತೀಯ ಸ್ಥಾನವನ್ನು ವಿನಿತಕುಮಾರ ಎಂ.ಬಿ. ಗಳಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಎಸ್.ಕೆ.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಲತಾ ಕಿತ್ತೂರ, ‘ಮನುಷ್ಯ ಎಷ್ಟೇ ಮೇಲಕ್ಕೇರಿದರೂ ತನ್ನ ನೈಜ ನೆಲೆಯನ್ನು ಎಂದಿಗೂ ಮೆರೆಯಬಾರದು. ನಮ್ಮ ಪೂರ್ವಿಕರು ನೀಡಿದಂತಹ ಆಚಾರ–ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ನಾವು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇವೆ. ಭಾರತದ ಸಂಸ್ಕೃತಿಯು ಜನರನ್ನು ಒಗ್ಗೂಡಿಸುವ ಸಂಸ್ಕೃತಿಯಾಗಿದೆ. ಯುವಜನರು ನಮ್ಮ ಸಂಸ್ಕೃತಿಯನ್ನು ಅರಿತುಕೊಂಡರೆ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಎ. ದೇಸಾಯಿ, ‘ನಮ್ಮ ಸಂಸ್ಕೃತಿ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ’ ಎಂದರು.

ಸಂಪನ್ಮೂಲ ವ್ಯಕ್ತಿ ಕೆವಿನ್ ಫರ್ನಾಂಡಿಸ್ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದರು.

ಸಲೋನಿ ಪಾಟೀಲ ಸ್ವಾಗತಿಸಿದರು. ಐಶ್ವರ್ಯಾ ಹೊಸೂರ ವರದಿ ವಾಚಿಸಿದರು. ವಾಣಿ ಚಿನ್ನಪ್ಪಗೌಡರ ಪರಿಚಯಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ಎಸ್. ಶಿಂಧೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜನಾ ಪವಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.