ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೋಳಿ’ ಸಂಭ್ರಮ: ಹಲಗೆ ಸದ್ದು

25ರಂದು ಕಾಮಣ್ಣನಿಗೆ ಸ್ವಾಗತ: 26ರಂದು ಬಣ್ಣವಾಡಲು ಸಿದ್ಧತೆ
ರವಿಕುಮಾರ ಹುಲಕುಂದ
Published 24 ಮಾರ್ಚ್ 2024, 5:32 IST
Last Updated 24 ಮಾರ್ಚ್ 2024, 5:32 IST
ಅಕ್ಷರ ಗಾತ್ರ

ಬೈಲಹೊಂಗಲ: ಹೋಳಿ ಹುಣ್ಣಿಮೆ ಪ್ರಯುಕ್ತ, ಪಟ್ಟಣದಲ್ಲಿ ಈಗ ಹಲಗೆ ವಾದನದ್ದೇ ಸದ್ದು. ಒಂದೆಡೆ ಮಕ್ಕಳು ಈಗಿನಿಂದಲೇ ರಂಗಿನಾಟದಲ್ಲಿ ಮಿಂದೆದ್ದರೆ, ಮತ್ತೊಂದೆಡೆ ಹಿರಿಯರು ಮತ್ತು ಯುವಕರು ಮಾರ್ಚ್‌ 25ರಂದು ಕಾಮಣ್ಣನನ್ನು ಬರಮಾಡಿಕೊಂಡು 26ರಂದು ಬಣ್ಣವಾಡಲು ಸಜ್ಜಾಗಿದ್ದಾರೆ.

ರಂಗಿನಾಟದ ಅಂಗವಾಗಿ ಸಿದ್ಧಪಡಿಸಿದ ರತಿ–ಮನ್ಮಥರ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಹುಣ್ಣಿಮೆಯಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಈ ಪ್ರತಿಮೆಗಳ ಮೆರವಣಿಗೆ ನಡೆಸಿ, ಪಟ್ಟಿ(ಹಣ) ಸಂಗ್ರಹಿಸಲಾಗುತ್ತದೆ. ಊರ–ಹಿರಿಯರು ಮಂಗಳವಾದ್ಯ ನುಡಿಸಿ, ಕಾಮಣ್ಣನಿಗೆ ಭಕ್ತಿ ಸಮರ್ಪಿಸುತ್ತಾರೆ.

ವಿವಿಧ ಓಣಿಗಳ ಹುಡುಗರು ಮನೆಗಳಲ್ಲಿನ ಕುಳ್ಳು, ಕಟ್ಟಿಗೆ, ನಿಚ್ಚಣಿಕೆಯನ್ನು ಕದ್ದು ತಂದು, ಒಂದೆಡೆ  ಹಾಕುತ್ತಾರೆ. ಅವುಗಳನ್ನೆಲ್ಲ ಒಟ್ಟುಗೂಡಿಸಿ, ಧಾರ್ಮಿಕ ವಿಧಿಯಂತೆ ಕಾಮಣ್ಣನನ್ನು ದಹಿಸುತ್ತಾರೆ.

ಆಕರ್ಷಕ ಚೌಡಿ ಕಾಮಣ್ಣರು: ಇಲ್ಲಿನ ಅಂಬೇಡ್ಕರ್ ನಗರ, ಹನುಮಂತ ದೇವರ ದೇವಸ್ಥಾನ, ಭಟ್ಟನ ಕೂಟ, ಚನ್ನಮ್ಮನ ಸಮಾಧಿ ರಸ್ತೆಯಲ್ಲಿ ಪ್ರತಿಷ್ಠಾಪನೆಗೆ ಸಿದ್ಧಪಡಿಸಿದ ‘ಚೌಡಿ’ ಕಾಮಣ್ಣರ ಮೂರ್ತಿಗಳು ಆಕರ್ಷಕವಾಗಿವೆ. ಈ ಕಾಮಣ್ಣರಿಗೆ ದೊಡ್ಡ  ಪರಂಪರೆಯೇ ಇದೆ. ಇಲ್ಲಿ ಮೊದಲು ಕಾಮಣ್ಣನಿಗೆ ಬೆಂಕಿ ಹೊತ್ತಿಸಲಾಗುತ್ತಿದೆ. ನಂತರ ಊರಲ್ಲಿನ ವಿವಿಧ ಬಡಾವಣೆಗಳಲ್ಲಿ ಕಾಮಣ್ಣನ ದಹನ ಪ್ರಕ್ರಿಯೆ ನಡೆಯುತ್ತದೆ.

ಸಮೃದ್ಧವಾಗಿ ಬೆಳೆ:  ಕಾಮಣ್ಣನನ್ನು ಸುಡುವ ಕಾಲಕ್ಕೆ ಬೂದಿ ಯಾವ ದಿಕ್ಕಿಗೆ ಹಾರುವುದೋ, ಆ ಭಾಗದಲ್ಲಿ ಉತ್ತಮ ಮಳೆಯಾಗುತ್ತದೆ. ಸಮೃದ್ಧಿಯಾಗಿ ಬೆಳೆ ಬರುತ್ತದೆ ಎಂಬ ನಂಬಿಕೆಯಿದೆ.

ಬೈಲಹೊಂಗಲದ ಎಂ.ಜೆ. ಹೌಸಿಂಗ್ ಕಾಲೊನಿಯಲ್ಲಿ ಮಕ್ಕಳು ಹಲಗೆ ಬಾರಿಸಿ ಸಂಭ್ರಮಿಸಿದರು
ಬೈಲಹೊಂಗಲದ ಎಂ.ಜೆ. ಹೌಸಿಂಗ್ ಕಾಲೊನಿಯಲ್ಲಿ ಮಕ್ಕಳು ಹಲಗೆ ಬಾರಿಸಿ ಸಂಭ್ರಮಿಸಿದರು
ಬೈಲಹೊಂಗಲದ ಕುಲಕರ್ಣಿ ಗಲ್ಲಿಯ ಚೌಡಿ ಕಾಮಣ್ಣನ ಮೂರ್ತಿ
ಬೈಲಹೊಂಗಲದ ಕುಲಕರ್ಣಿ ಗಲ್ಲಿಯ ಚೌಡಿ ಕಾಮಣ್ಣನ ಮೂರ್ತಿ
ಪವನ
ಪವನ
ಗಂಗಾಧರ
ಗಂಗಾಧರ
ಹೋಳಿ ಹುಣ್ಣಿಮೆ ಶಾಂತಿ ಸೌಹಾರ್ದತೆ ಸಾರುತ್ತದೆ. ಇದನ್ನು ಸಂಭ್ರಮದಿಂದ ಆಚರಿಸಬೇಕೆಂದು ಸೂಚಿಸಿದ್ದೇವೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ನಿಶ್ಚಿತ
ಎಂ.ಎಸ್.ಹೂಗಾರ ಸಿಪಿಐ
ನಾವು ಹಲವು ತಲೆಮಾರಿನಿಂದ ಕಾಮಣ್ಣನನ್ನು ತಯಾರಿಸಿಕೊಂಡು ಬಂದಿದ್ದೇವೆ. ಈ ವರ್ಷ ಮೂರ್ತಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ 200ಕ್ಕೂ ಹೆಚ್ಚು ಮೂರ್ತಿ ತಯಾರಿಸಿ ಮಾರಾಟ ಮಾಡಿದ್ದೇವೆ
ಪವನ ಬಡಿಗೇರ ಮೂರ್ತಿಕಾರ ಬೈಲಹೊಂಗಲ
ಬೈಲಹೊಂಗಲದಲ್ಲಿ ಹೋಳಿ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ. ಈ ವರ್ಷ ಹಲಗೆ ಸದ್ದು ಹೆಚ್ಚಾಗಿದೆ. ರಾತ್ರಿಯಿಡೀ ಹಲಗೆ ವಾದನ ಸಂಗೀತ ನಾದ ಕೇಳಿಬರುತ್ತಿದೆ
ಗಂಗಾಧರ ಸಾಲಿಮಠ ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT