ಗುರುವಾರ , ಆಗಸ್ಟ್ 22, 2019
26 °C

ಹುದಲಿ: ಗೆಳೆಯರ ಬಳಗದಿಂದ ರಂಗಮಂದಿರ

Published:
Updated:
Prajavani

ಬೆಳಗಾವಿ: ತಾಲ್ಲೂಕಿನ ಹುದಲಿ ಗ್ರಾಮದ ಗುಡ್ಡದ ಮೇಲಿನ ನಿರ್ವಾಣೇಶ್ವರ ದೇವಸ್ಥಾನದ ಬಳಿ ನಿರ್ವಾಣೇಶ್ವರ ಗೆಳೆಯರ ಬಳಗದಿಂದ ಬಯಲು ರಂಗಮಂದಿರ ನಿರ್ಮಾಣಕ್ಕೆ ಸೋಮವಾರ ಅಡಿಗಲ್ಲು ಸಮಾರಂಭ ನೆರವೇರಿಸಲಾಯಿತು.

ಗ್ರಾಮದ 1988-89ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿರ್ವಾಣೇಶ್ವರ ಗೆಳೆಯರ ಬಳಗವನ್ನು ರಚಿಸಿಕೊಂಡು ನಾಲ್ಕು ವರ್ಷಗಳಿಂದ ಶ್ರಮದಾನದ ಮೂಲಕ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಇಲ್ಲಿ ಪ್ರತಿ ವರ್ಷ ಸಂಕ್ರಮಣದ ಸಂದರ್ಭದಲ್ಲಿ ಜಾತ್ರೆ, ಮಹಾಪ್ರಸಾದ ವಿತರಣೆ, ‌‌‌ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ, ರಂಗಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಮುಖಂಡರಾದ ಅಡಿವೆಪ್ಪ ಗಿಡಗೇರಿ, ಶಂಕರ ಮಾರಿಮನಿ, ಶೇಖರ ನಾಯಿಕ, ಮಹಾದೇವ ತುಕ್ಕಾರ, ನಾಗರಾಜ ಮೋದಗಿ, ಸಿದಗೌಡ ಮೋದಗಿ, ಶಿವಾಜಿ ಕದಂ, ನಾಗರಾಜ ಪತ್ತಾರ, ಜಿ.ಎಸ್. ಕಮ್ಮಾರ, ರಾಮಪ್ಪ ಮಾಳಗಿ, ವೀರಭದ್ರ ಮಳಗಲಿ, ಬಸನಿಂಗ ಗುಬಚಿ, ಲಕ್ಷ್ಮಣ ನೆಲಗಂಟಿ, ಅಡಿವೆಪ್ಪ ಮಳಗಲಿ, ಮಲ್ಲಿಕಾರ್ಜುನ ಗಂಡಬಾಳಿ, ಬೈರು ಮೊಸಳಿ, ಕುಮಾರ ಶಾಮ ಬಡಗೇರ, ಯಲ್ಲಪ್ಪ ಗಿಡಗೇರಿ ಇದ್ದರು.

Post Comments (+)