ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಕ್ಕೇರಿ | ಪಾರ್ಥನಾ ಕೂಟ: ಗುಡ್ ಫ್ರೈಡೇ ಸಿದ್ಧತೆ

Published 20 ಮಾರ್ಚ್ 2024, 16:07 IST
Last Updated 20 ಮಾರ್ಚ್ 2024, 16:07 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನ ಹಿಡಕಲ್ ಡ್ಯಾಂನ ಸೆಂಟ್ ಮಿಖಾಯೇಲ್ ಚರ್ಚ್‌ನಲ್ಲಿ ಗುಡ್ ಫ್ರೈಡೇ ಸಿದ್ಧತೆ ಅಂಗವಾಗಿ ಒಂದು ದಿನದ ಪ್ರಾರ್ಥನಾ ಕೂಟವನ್ನು ಪಾದ್ರಿ ಲೂರ್ದ್ ಸ್ವಾಮಿ ನೇತೃತ್ವದಲ್ಲಿ ಈಚೆಗೆ ಆಯೋಜಿಸಲಾಗಿತ್ತು.

ಹಿಡಕಲ್ ಡ್ಯಾಂ, ಗೋಕಾಕ ಫಾಲ್ಸ್, ಸಂಕೇಶ್ವರ, ಗೊಡಚಿನಮಲ್ಕಿ, ಪಾಶ್ಚಾಪುರ ಮೊದಲಾದ ಗ್ರಾಮಗಳ ಕ್ರಿಶ್ಚಿಯನ್ನರು ಗುಡ್ ಫ್ರೈಡೇ ಹಾಗೂ ಯೇಸುವಿನ ಪುನರುತ್ಥಾನದ ಹಬ್ಬಕ್ಕೆ ಸಿದ್ದತೆ ಮಾಡಿಕೊಂಡರು.

ಹಾಸನದ ಪಾದ್ರಿ ಡೇವಿಡ್, ಜಾನ್, ವಿಜಯಕುಮಾರ ಅವರು, ಪ್ರೀತಿ, ಸೇವೆ, ತ್ಯಾಗ, ಕ್ಷಮೆ, ದೈವಭಕ್ತಿ ಮಹತ್ವದ ಬಗ್ಗೆ ಬೋಧನೆ ಮಾಡಿದರು.

ಸಂಜೆ ಬಲಿಪೂಜೆ ಅರ್ಪಿಸಿದ ಮೇನಿನೊ ಗೋನ್ಸಾಲಿವಿಸ್ ಸಂತ, ಆರೂಡಪ್ಪ ವಿರಕ್ತಮಠದ ದೇಶನೂರ ಅವರು  ಭಕ್ತರ ಒಳಿತಿಗಾಗಿ ಪ್ರಾರ್ಥಿಸಿದರು. ಸೇಂಟ್ ತೆರೆಸಾ ಶಾಲೆಯ ಸಿಸ್ಟರ್‌ಗಳು ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT