ಏನೇನು ಸೌಲಭ್ಯ ಇವೆ?:
ಹುಕ್ಕೇರಿ–ಗೋಕಾಕ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಭವನ ಉತ್ತಮ ಸಾರಿಗೆ ಸೌಕರ್ಯ ಹೊಂದಿದೆ. 10 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನೆಲಮಹಡಿ, 3,500 ಚದರ ಅಡಿ ವಿಸ್ತೀರ್ಣದಲ್ಲಿ ಮೊದಲ ಮಹಡಿ ನಿರ್ಮಾಣವಾಗಿದ್ದು, ಎರಡು ರಿಹರ್ಸಲ್ ಕೋಣೆ, ವಿಸ್ತಾರವಾದ ವೇದಿಕೆ ಇದೆ. 1 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.