ಪ್ರಜಾವಾಣಿ ವಾರ್ತೆ

ಮೂಡಲಗಿ: ‘ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿದ್ದು, ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟದ ಸೌಲಭ್ಯ ಹೊಂದಿದ್ದು, ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು.

ಉಪಾಹಾರ ₹5 ಮತ್ತು ಊಟ ₹10 ದರದಲ್ಲಿ ಲಭ್ಯವಿರುವುದರಿಂದ ಪರಸ್ಥಳಗಳಿಂದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳು, ಸಂತೆ, ಆಸ್ಪತ್ರೆಗೆ ಬರುವ ಜನರು ಈ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಗುಣಮಟ್ಟದ ಆಹಾರ ವಿತರಿಸಬೇಕು ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಸೂಚಿಸಿದರು.

ಶಾಸಕರು ತಾವೇ ಸ್ವತಃ ಜನರಿಗೆ ಉಪಾಹಾರ ಬಡಿಸುವ ಮೂಲಕ ಕ್ಯಾಂಟಿನ್ಗೆ ಚಾಲನೆ ನೀಡಿದರು.

ಪುರಸಭೆ ಅಧ್ಯಕ್ಷೆ ಖುರ್ಷಾದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷ ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಹಣಮಂತ ಗುಡ್ಲಮನಿ, ಸದಸ್ಯರಾದ ಜಯಾನಂದ. ಪಾಟೀಲ, ಶಿವು ಚಂಡಕಿ, ಆದಮ ತಾಂಬೋಳಿ, ಸುಭಾಷ ಸಣ್ಣಕ್ಕಿ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.