ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ‘ಕೇಬಲ್‌ ಕಾರ್‌’ ಅಳವಡಿಸಲು ಸಮ್ಮತಿ

ಕೇಂದ್ರದಿಂದ ಗ್ರೀನ್ ಸಿಗ್ನಲ್
Published 20 ಸೆಪ್ಟೆಂಬರ್ 2023, 6:58 IST
Last Updated 20 ಸೆಪ್ಟೆಂಬರ್ 2023, 6:58 IST
ಅಕ್ಷರ ಗಾತ್ರ

ಬೆಳಗಾವಿ: ಯಳ್ಳೂರಿನಿಂದ ರಾಜಹಂಸಘಡ ಕೋಟೆಯವರೆಗೆ ‘ಕೇಬಲ್‌ ಕಾರ್‌’ ಅಳವಡಿಸುವ ಯೋಜನೆಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನವದೆಹಯಲಿಯಲ್ಲಿ ಸೋಮವಾರ ಸಚಿವರನ್ನು ಭೇಟಿ ಮಾಡಿದ ಶಾಸಕ ಅಭಯ ಮಾಟೀಲ, ಈ ಮಹತ್ವಾಕಾಂಕ್ಷಿ ಯೋಜನೆಯ ಮನವರಿಕೆ ಮಾಡಿದರು.

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯಳ್ಳೂರು ಗ್ರಾಮದಿಂದ ರಾಜಹಂಸಘಡ ಬೆಟ್ಟದವರೆಗಿನ ಕೇಬಲ್ ಕಾರ್ ಅಳವಡಿಸಲು ₹60 ಕೋಟಿಯ ಯೋಜನೆಗೆ ಮಂಜೂರಾತಿ ನೀಡುವಂತೆ ಶಾಸಕ ಅಭಯ ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಕೇಂದ್ರ ಸಚಿವ ಪರಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಡಿಸೆಂಬರ್ ಒಳಗಾಗಿ ವರದಿ ಪಡೆದು ಅಗತ್ಯ ಅನುದಾನ ಬಿಡುಗಡೆ ಮಾಡಿ, ಜನವರಿ ತಿಂಗಳ ನಂತರ ಕೇಬಲ್ ಕಾರ್ ಯೋಜನೆಯ ಕಾಮಗಾರಿ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿಯನ್ನು ಪ್ರವಾಸಿ ಆಕರ್ಷಣೆಯ ಕೇಂದ್ರ ಮಾಡಲು, ಅಕ್ಕಪಕ್ಕದ ರಾಜ್ಯಗಳ ಪ್ರವಾಸಿಗರನ್ನೂ ಸೆಳೆಯಲು ಈ ‘ಕೇಬಲ್ ಕಾರ್’ ಯೋಜನೆಯ ಅನುಷ್ಠಾನ ಅಗತ್ಯವಾಗಿದೆ. ಕೇಂದ್ರದ ಅನುಮತಿ ಪಡೆಯುವಲ್ಲಿ ಯುಶಸ್ವಿಯಾಗಿದ್ದೇನೆ ಎಂದು ಶಾಸಕ ತಿಳಿಸಿದ್ದಾರೆ.

ಈ ಯೋಜನೆಯ ಅನುಷ್ಠಾನದಿಂದ ಬೆಳಗಾವಿಯ ಮಹಾನಗರದ ಜನ ಕೂಡ ಸಂಭ್ರಮಪಡಬಹುದು. ಯಳ್ಳೂರು ಗ್ರಾಮವು ಪಿಕ್ನಿಕ್ ತಾಣ ಆಗುವದರ ಜೊತೆಗೆ, ಪಕ್ಕದ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪ್ರವಾಸಿಗರನ್ನು ಬೆಳಗಾವಿಯತ್ತ ಸೆಳೆಯಬಹುದು. ಇದರಿಂದ ಬೆಳಗಾವಿಯ ಆರ್ಥಿಕ ವಹಿವಾಟು ಹೆಚ್ಚಳವಾಗಲಿದೆ ಎಂದು ಶಾಸಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT