ಬುಧವಾರ, ಏಪ್ರಿಲ್ 14, 2021
25 °C

ಮಹಿಳೆಯರು ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು: ಅಂಗಡಿ ಶಿಕ್ಷಣ ಸಂಸ್ಥೆ ನಿರ್ದೇಶಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಮಹಿಳೆಯರು ಹಿಂಜರಿಕೆ ಬಿಟ್ಟು ಆತ್ಮವಿಶ್ವಾಸ, ಸ್ಪರ್ಧಾ ಮನೋಭಾವ ಹಾಗೂ ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿಯೊಂದಿಗೆ ಸಬಲೀಕರಣ ಸಾಧಿಸಿ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ಬೆಂಬಲ ನೀಡಿ ಪ್ರೊತ್ಸಾಹಿಸುತ್ತಿದೆ’ ಎಂದು ಅಂಗಡಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ ಹೇಳಿದರು.

ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿನಿಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯಶಸ್ವಿ ಮಹಿಳೆಯರ ಜೀವನದಿಂದ ಸ್ಫೂರ್ತಿ ಪಡೆದು ಅವರಂತೆ ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.

ಅಂಗಡಿ ಇಂಟರ್‌ನ್ಯಾಷನಲ್ ಶಾಲೆಯ ಮುಖ್ಯಶಿಕ್ಷಕಿ ಆಶಾ ರಜಪೂತ, ‘ಮಹಿಳೆ ಸ್ವಾವಲಂಬಿಯಾಗಿ ಬದುಕುವ ಸಾಮರ್ಥ್ಯ ಹೊಂದಿದ್ದಾಳೆ. ಆತ್ಮವಿಶ್ವಾಸ ಗಳಿಸಿಕೊಂಡು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸವಾಲುಗಳನ್ನು ಎದುರಿಸಿ ಜವಾಬ್ದಾರಿಯಿಂದ ಮುನ್ನುಗ್ಗಿ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದು ಅವಳ ಸಾಮರ್ಥ್ಯವನ್ನು ತೋರಿಸುತ್ತದೆ’ ಎಂದರು.

ಅಂಗಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಮಂಗಲ ಅಂಗಡಿ ಇದ್ದರು.

‘ಡಿಜಿಟಲ್ ಲರ್ನಿಂಗ್’ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಡೋಲಿ, ಕೆ.ಕೆ. ಕೊಪ್ಪ, ಹುದಲಿ, ಮುತ್ನಾಳ, ಸುಳೇಭಾವಿ, ಕಂಗ್ರಾಳಿ, ಮಚ್ಚೆ, ಕಲ್ಲೆಹೋಳ, ಮುಚ್ಚಂಡಿ, ಮೋದಗಾ, ಸಾಂಬ್ರಾ, ಮಾರಿಹಾಳ, ಕಿಣಯೆ, ಸುಳಗಾ, ಮಂಡೋಳ್ಳಿ, ಪೀರನವಾಡಿ, ಸಂತಿ ಬಸ್ತವಾಡ, ಕರ್ಲೆ, ಬೆಕ್ಕಿನಕೇರಿ, ಉಚಗಾಂವ, ದೇಸೂರು, ಯೆಳ್ಳೂರು ಮೊದಲಾದ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಗಳ 35 ಶಿಕ್ಷಕಿಯರಿಗೆ ಕಂಪ್ಯೂಟರ್ ತರಬೇತಿ ನೀಡಲಾಯಿತು. ಅವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಕಾಲೇಜಿನ ಮಹಿಳಾ ಸಂಘದ ಸಂಯೋಜಕಿ ಪ್ರೊ.ಭಾರತಿ ಕಾಳೆ, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ.ಸಂಗೀತಾ ದೇಸಾಯಿ, ಪ್ರೊ.ಅನುರಾಧಾ ಹೂಗಾರ, ಪ್ರೊ.ಸಾರಿಖಾ ಪಾವಸೆ, ಡಾ.ರಶ್ಮಿ ಮಾಲ್ಗಾನ್, ಪ್ರೊ.ರಾಜೇಶ್ವರಿ ಕಿಸನ್, ಪ್ರೊ.ಸಂಜನಾ ಕವಟಗಿ, ಪ್ರೊ.ಸಂಧ್ಯಾ ಶಾನಬಾಗ, ಶೋಭಾ ಎ., ಪ್ರೊ.ಪ್ರಿಯಾಂಕಾ ಪೂಜಾರಿ, ಪ್ರೊ.ಶೀತಲ ಪಾಟೀಲ, ಪ್ರೊ.ವಿನಯಚಂದ್ರಿಕಾ ಕಾಳೆ, ಮಂಜುಶ್ರೀ ಹಾವಣ್ಣವರ, ತೇಜಸ್ವಿನಿ ಸೊಬರದ ಉಪಸ್ಥಿತರಿದ್ದರು.

ಪ್ರೊ.ಅನುರಾಧಾ ಹೂಗಾರ ಸ್ವಾಗತಿಸಿದರು. ಅರ್ಫಾ ಚಜ್ಜು ನಿರೂಪಿಸಿದರು. ಪ್ರೊ.ಐಶ್ವರ್ಯಾ ಮಾನೆ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು