ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್ ರೋಡ್ ಶೋ: ಶೆಟ್ಟರ್ ಅವರಿಂದ ಶಕ್ತಿ ಪ್ರದರ್ಶನ

Published 17 ಏಪ್ರಿಲ್ 2024, 9:05 IST
Last Updated 17 ಏಪ್ರಿಲ್ 2024, 9:05 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌, ಬುಧವಾರ ಅದ್ಧೂರಿ ಮೆರವಣಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಕೂಡ ಜತೆಯಾದರು.

ಇಲ್ಲಿನ ಸಮಾದೇವಿ ಮಂದಿರದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಿ.ಎಸ್‌.ಯಡಿಯೂರಪ್ಪ ಅವರು ಮೆರವಣಿಗೆ ಬಳಿ ಬರುತ್ತಿದ್ದಂತೆಯೇ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಜೈಕಾರ ಹಾಕಿ, ಬಾವುಟಗಳನ್ನು ಹಾರಾಡಿಸಿ ನಾಯಕರಿಗೆ ಸ್ವಾಗತ ಕೋರಿದರು.

ಅಪಾರ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಕೇಸರಿ ಪೇಟ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡರು. ಕೇಸರಿ ಬಾವುಟ, ಬಿಜೆಪಿ ಚಿಹ್ನೆಯ ಬಾವುಟ, ಅಂಬೇಡ್ಕರ್‌ ಭಾವಚಿತ್ರ ಹೊಂದಿದ ನೀಲಿ ಬಾವುಟ... ಹೀಗೆ ವಿವಿಧ ರೀತಿಯ ಬಾವುಟಗಳು ರಾರಾಜಿಸಿದವು. ಬಿಳಿ ಉಡುಗೆಯಲ್ಲಿ ಬಂದಿದ್ದ ಯುವಜನರು ಭಗವಾಧ್ವಜ ಹಾರಾಡಿಸಿ ಗಮನ ಸೆಳೆದರು.

ನಗಾರಿ, ಡೋಲ್‌ ತಾಸೆ, ಕರಡಿಮಜಲು, ಮಹಿಳಾ ಡೋಲ್‌ ತಂಡ, ಡೊಳ್ಳು ಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ದಿಂಡಿ ಭಜನಾ ಮಂಡಳದ ಮಹಿಳೆಯರು ಕೂಡ ‘ವಿಠ್ಠಲ ವಿಠ್ಠಲ ಹರಿ ಓಂ ವಿಠ್ಠಲ’ ಎಂದು ಭಜನೆ ಮಾಡಿದರು. ತಲೆಯ ಮೇಲೆ ತುಳಸಿಕಟ್ಟೆ ಹೊತ್ತು ಸಾಗಿದ ಮಹಿಳೆಯರು ಗಮನ ಸೆಳೆದರು.

ಮೆರವಣಿಗೆ ಸಾಗಿ ದಾರಿಯ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಕಾರಣ ರಸ್ತೆಗಳು ಕಿಕ್ಕಿರಿದವು. ಸಂಚಾರ ಸಂಪೂರ್ಣ ಬಂದ್‌ ಆಯಿತು.

ಮಾರ್ಗದುದ್ದಕ್ಕೂ ಮೋದಿ, ಮೋದಿ ಎಂಬ ಕೂಗಾಟ ಮುಂದುವರಿಯಿತು. ಹರ್‌ಹರ್‌ ಮೋದಿ, ಹರ್‌ ಘರ್‌ ಮೋದಿ, ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌ ಘೋಷಣೆ ಮೊಳಗಿಸಿದರು. ಹೆಜ್ಜೆ ಹೆಜ್ಜೆಗೂ ಜೈ ಶ್ರೀರಾಮ್‌, ಜೈಜೈ ಶ್ರೀರಾಮ್‌ ಎನ್ನುತ್ತ ಸಾಗಿದರು. ಮಹಿಳಾ ತಂಡಗಳು ಕೂಡ ರಾಮ ನಾಮ ಜಪ ಮಾಡುತ್ತಲೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು.

ಸಮಾದೇವಿ ಗಲ್ಲಿಯಿಂದ ಆರಂಭವಾದ ಮೆರವಣಿಗೆ ಖಡೇ ಬಜಾರ್‌ ರಸ್ತೆ, ಗಣಪತಿ ಗಲ್ಲಿ, ಶನಿವಾರ ಕೂಟ್ ಮೂಲಕ ಕಾಕತಿ ವೇಸ್‌ನಲ್ಲಿ ಸಾಗಿ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಕೊನೆಗೊಂಡಿತು.

ವೃತ್ತದಲ್ಲಿ ಕಿಕ್ಕಿರಿದು ಸೇರಿದ ಜನ

ಮೆರವಣಿಗೆ ರಾಣಿ ಚನ್ನಮ್ಮ ವೃತ್ತಕ್ಕೆ ಬಂದಾಗ ಅಪಾರ ಸಂಖ್ಯೆಯ ಜನ ಕಿಕ್ಕಿರಿದು ಸೇರಿದರು. ನಾಲ್ಕೂ ದಿಕ್ಕಿನ ವಾಹನ ಸಂಚಾರ ಕೆಲ ನಿಮಿಷ ಬಂದ್‌ ಆಯಿತು. ಬೃಹತ್‌ ಹಾರ ತಂದ ಕಾರ್ಯಕರ್ತರು ಕ್ರೇನ್‌ ಸಹಾಯದಿಂದ ನಾಯಕರು ಸಂಚರಿಸುತ್ತಿದ್ದ ವಾಹನಕ್ಕೆ ಹಾಕಿದರು.

ಅಲ್ಲಿಂದ ವಾಹನ ಇಳಿದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಾಯಕರು, ಚುನಾವಣಾಧಿಕಾರಿ ನಿತೇಶ್‌ ಪಾಟೀಲ ಅವರಿಗೆ ಉಮೇದುವಾರಿಕೆ ಪತ್ರ ಸಲ್ಲಿಸಿದರು.

ಬಿ.ಎಸ್. ಯಡಿಯೂರಪ್ಪ, ಪ್ರಮೋದ ಸಾವಂತ್, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಅನಿಲ ಬೆನಕೆ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಮೇಯರ್‌ ಸವಿತಾ ಕಾಂಬಳೆ ಕೂಡ ಸಾಥ್‌ ನೀಡಿದರು.

‘ಕಾಂಗ್ರೆಸ್ಸಿಗರಿಂದ ಸುಳ್ಳು ಪ್ರಚಾರ’

ಬೆಳಗಾವಿ: ‘ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ವಿಚಾರಗಳು ಇಲ್ಲ. ಹಾಗಾಗಿ, ನಾನು ಬೆಳಗಾವಿಗೆ ಮೋಸ ಮಾಡಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲಿ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ರಾಷ್ಟ್ರೀಯತೆ ಆಧಾರದ ಮೇಲೆ ನನ್ನ ಗೆಲುವು ನಿಶ್ಚಿತ’ ಎಂದರು.

‘ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಸಂಗಣ್ಣ ಕರಡಿ ಅವರು ಇದೇ ವಿಚಾರಕ್ಕೆ ಪಕ್ಷ ಬಿಟ್ಟಿರಬಹುದು. ನಾನು ಪಕ್ಷ ತೊರೆದಿದ್ದೆ. ಮರಳಿ ಬಂದಿದ್ದೇನೆ. ನನ್ನ ಮೂಲ ಆರ್‌ಎಸ್ಎಸ್‌ ಹಾಗೂ ಬಿಜೆಪಿ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಯಾವುದೇ ಆಪರೇಷನ್ ಕಮಲದ ಅವಶ್ಯಕತೆ ಇಲ್ಲ. ಈ ವಿಚಾರವಾಗಿ ಸ್ವತಃ ಗುಬ್ಬಿ ಶಾಸಕರೇ ನೇರವಾಗಿ ಹೇಳಿದ್ದಾರೆ‌. ಶಾಸಕರಲ್ಲಿ ಇರುವ ಒಳಬೇಗುದಿ ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ನಗರದಲ್ಲಿ ಬಿಜೆಪಿ ಶಕ್ತಿ ‍ಪ್ರದರ್ಶನ, ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ ಯಡಿಯೂರಪ್ಪ, ಪ್ರಮೋದ ಸಾವಂತ್‌.

ಜಗದೀಶ ಶೆಟ್ಟರ್ ಅದ್ಧೂರಿ ಮೆರವಣಿಗೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌, ಬುಧವಾರ ಅದ್ಧೂರಿ ಮೆರವಣಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ಕೂಡ ಜತೆಯಾದರು.

ಇಲ್ಲಿನ ಸಮಾದೇವಿ ಮಂದಿರದಲ್ಲಿ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಿ.ಎಸ್‌.ಯಡಿಯೂರಪ್ಪ ಅವರು ಮೆರವಣಿಗೆ ಬಳಿ ಬರುತ್ತಿದ್ದಂತೆಯೇ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪಟಾಕಿ ಸಿಡಿಸಿ, ಜೈಕಾರ ಹಾಕಿ, ಬಾವುಟಗಳನ್ನು ಹಾರಾಡಿಸಿ ನಾಯಕರಿಗೆ ಸ್ವಾಗತ ಕೋರಿದರು.

ಅಪಾರ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಕೇಸರಿ ಪೇಟ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡರು. ಕೇಸರಿ ಬಾವುಟ, ಬಿಜೆಪಿ ಚಿಹ್ನೆಯ ಬಾವುಟ, ಅಂಬೇಡ್ಕರ್‌ ಭಾವಚಿತ್ರ ಹೊಂದಿದ ನೀಲಿ ಬಾವುಟ... ಹೀಗೆ ವಿವಿಧ ರೀತಿಯ ಬಾವುಟಗಳು ರಾರಾಜಿಸಿದವು. ಬಿಳಿ ಉಡುಗೆಯಲ್ಲಿ ಬಂದಿದ್ದ ಯುವಜನರು ಭಗವಾಧ್ವಜ ಹಾರಾಡಿಸಿ ಗಮನ ಸೆಳೆದರು.

ನಗಾರಿ, ಡೋಲ್‌ ತಾಸೆ, ಕರಡಿಮಜಲು, ಮಹಿಳಾ ಡೋಲ್‌ ತಂಡ, ಡೊಳ್ಳು ಮೇಳಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ದಿಂಡಿ ಭಜನಾ ಮಂಡಳದ ಮಹಿಳೆಯರು ಕೂಡ ‘ವಿಠ್ಠಲ ವಿಠ್ಠಲ ಹರಿ ಓಂ ವಿಠ್ಠಲ’ ಎಂದು ಭಜನೆ ಮಾಡಿದರು. ತಲೆಯ ಮೇಲೆ ತುಳಸಿಕಟ್ಟೆ ಹೊತ್ತು ಸಾಗಿದ ಮಹಿಳೆಯರು ಗಮನ ಸೆಳೆದರು.

ಮೆರವಣಿಗೆ ಸಾಗಿ ದಾರಿಯ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದ್ದ ಕಾರಣ ರಸ್ತೆಗಳು ಕಿಕ್ಕಿರಿದವು. ಸಂಚಾರ ಸಂಪೂರ್ಣ ಬಂದ್‌ ಆಯಿತು.

ಮಾರ್ಗದುದ್ದಕ್ಕೂ ಮೋದಿ, ಮೋದಿ ಎಂಬ ಕೂಗಾಟ ಮುಂದುವರಿಯಿತು. ಹರ್‌ಹರ್‌ ಮೋದಿ, ಹರ್‌ ಘರ್‌ ಮೋದಿ, ಅಬ್‌ ಕಿ ಬಾರ್‌ ಚಾರ್‌ ಸೌ ಪಾರ್‌ ಘೋಷಣೆ ಮೊಳಗಿಸಿದರು. ಹೆಜ್ಜೆ ಹೆಜ್ಜೆಗೂ ಜೈ ಶ್ರೀರಾಮ್‌, ಜೈಜೈ ಶ್ರೀರಾಮ್‌ ಎನ್ನುತ್ತ ಸಾಗಿದರು. ಮಹಿಳಾ ತಂಡಗಳು ಕೂಡ ರಾಮ ನಾಮ ಜಪ ಮಾಡುತ್ತಲೇ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದವು.

ಸಮಾದೇವಿ ಗಲ್ಲಿಯಿಂದ ಆರಂಭವಾದ ಮೆರವಣಿಗೆ ಖಡೇ ಬಜಾರ್‌ ರಸ್ತೆ, ಗಣಪತಿ ಗಲ್ಲಿ, ಶನಿವಾರ ಕೂಟ್ ಮೂಲಕ ಕಾಕತಿ ವೇಸ್‌ನಲ್ಲಿ ಸಾಗಿ ರಾಣಿ ಚನ್ನಮ್ಮ ವೃತ್ತಕ್ಕೆ ಬಂದು ಕೊನೆಗೊಂಡಿತು.

ವೃತ್ತದಲ್ಲಿ ಕಿಕ್ಕಿರಿದು ಸೇರಿದ ಜನ

ಮೆರವಣಿಗೆ ರಾಣಿ ಚನ್ನಮ್ಮ ವೃತ್ತಕ್ಕೆ ಬಂದಾಗ ಅಪಾರ ಸಂಖ್ಯೆಯ ಜನ ಕಿಕ್ಕಿರಿದು ಸೇರಿದರು. ನಾಲ್ಕೂ ದಿಕ್ಕಿನ ವಾಹನ ಸಂಚಾರ ಕೆಲ ನಿಮಿಷ ಬಂದ್‌ ಆಯಿತು. ಬೃಹತ್‌ ಹಾರ ತಂದ ಕಾರ್ಯಕರ್ತರು ಕ್ರೇನ್‌ ಸಹಾಯದಿಂದ ನಾಯಕರು ಸಂಚರಿಸುತ್ತಿದ್ದ ವಾಹನಕ್ಕೆ ಹಾಕಿದರು.

ಅಲ್ಲಿಂದ ವಾಹನ ಇಳಿದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಾಯಕರು, ಚುನಾವಣಾಧಿಕಾರಿ ನಿತೇಶ್‌ ಪಾಟೀಲ ಅವರಿಗೆ ಉಮೇದುವಾರಿಕೆ ಪತ್ರ ಸಲ್ಲಿಸಿದರು.

ಬಿ.ಎಸ್. ಯಡಿಯೂರಪ್ಪ, ಪ್ರಮೋದ ಸಾವಂತ್, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ದುರ್ಯೋಧನ ಐಹೊಳೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಅನಿಲ ಬೆನಕೆ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಮೇಯರ್‌ ಸವಿತಾ ಕಾಂಬಳೆ ಕೂಡ ಸಾಥ್‌ ನೀಡಿದರು.

‘ಕಾಂಗ್ರೆಸ್ಸಿಗರಿಂದ ಸುಳ್ಳು ಪ್ರಚಾರ’

ಬೆಳಗಾವಿ: ‘ನನ್ನ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ವಿಚಾರಗಳು ಇಲ್ಲ. ಹಾಗಾಗಿ, ನಾನು ಬೆಳಗಾವಿಗೆ ಮೋಸ ಮಾಡಿದ್ದೇನೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆಯಲ್ಲಿ ಜಾತಿ ಲೆಕ್ಕಕ್ಕೆ ಬರುವುದಿಲ್ಲ. ರಾಷ್ಟ್ರೀಯತೆ ಆಧಾರದ ಮೇಲೆ ನನ್ನ ಗೆಲುವು ನಿಶ್ಚಿತ’ ಎಂದರು.

‘ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಸಂಗಣ್ಣ ಕರಡಿ ಅವರು ಇದೇ ವಿಚಾರಕ್ಕೆ ಪಕ್ಷ ಬಿಟ್ಟಿರಬಹುದು. ನಾನು ಪಕ್ಷ ತೊರೆದಿದ್ದೆ. ಮರಳಿ ಬಂದಿದ್ದೇನೆ. ನನ್ನ ಮೂಲ ಆರ್‌ಎಸ್ಎಸ್‌ ಹಾಗೂ ಬಿಜೆಪಿ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಪತನಕ್ಕೆ ಯಾವುದೇ ಆಪರೇಷನ್ ಕಮಲದ ಅವಶ್ಯಕತೆ ಇಲ್ಲ. ಈ ವಿಚಾರವಾಗಿ ಸ್ವತಃ ಗುಬ್ಬಿ ಶಾಸಕರೇ ನೇರವಾಗಿ ಹೇಳಿದ್ದಾರೆ‌. ಶಾಸಕರಲ್ಲಿ ಇರುವ ಒಳಬೇಗುದಿ ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT