ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ-ಬೆಂಗಳೂರು ಹೆದ್ದಾರಿ–4ರ ಕಾಮಗಾರಿ ವೀಕ್ಷಿಸಿದ ಜೊಲ್ಲೆ

Published 17 ಆಗಸ್ಟ್ 2023, 13:23 IST
Last Updated 17 ಆಗಸ್ಟ್ 2023, 13:23 IST
ಅಕ್ಷರ ಗಾತ್ರ

ಯಮಕನಮರಡಿ: ನಿಪ್ಪಾಣಿ, ಕಣಗಲಾ, ಸಂಕೇಶ್ವರ, ಹೆಬ್ಬಾಳ, ಹತ್ತರಗಿ ಮಣಗುತ್ತಿ, ಸುತಗಟ್ಟಿ ಹಾಗೂ ಹೊಸವಂಟಮೂರಿ ಗ್ರಾಮಗಳ ಮುಖ್ಯರಸ್ತೆಯಾದ ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿ–4 ರ ರಸ್ತೆ ಕಾಮಗಾರಿಗಳನ್ನು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬುಧವಾರ ವೀಕ್ಷಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ಆರು ಮಾರ್ಗಗಳ ನಿರ್ಮಾಣ ಹಂತದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರಿಗೆ ಆಯಾ ಗ್ರಾಮಗಳ ಬಳಿ ರಸ್ತೆ ಸಂಚಾರ ಅನುಕೂಲವಾಗುವಂತೆ ಕಲ್ಪಿಸಲಾಗಿದೆ.  ಇದರಿಂದ ಸಂಚಾರ ಸುಗಮವಾಗುವುದು’ ಎಂದರು.

ಈ ಸಂದರ್ಭದಲ್ಲಿ ಹೊಸವಂಟಮೂರಿ ಗ್ರಾಮದ ಪ್ರಮುಖ ನಾಯಕರು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಿದರು. ಬಿಜೆಪಿ ಯುವ ಮುಖಂಡ ರವಿ ಹಂಜಿ, ಅಣ್ಣಪ್ಪಾ ಬೇಡವಾಡೆ, ಉದಯ ನಿರ್ಮಳ, ಕುಶಾಲ ರಜಪೂತ, ಅಜೀತ ಮಗದುಮ್ಮ, ಕಾಡಪ್ಪಾ ಪರಲಗೋಟ, ನಾನಾ ಠಕೇಕರ, ಬಸವರಾಜ ಸತ್ಯನಗೋಳ, ಬಾಳಾಪ್ಪಾ ಪರಲಗೋಟ, ಪರಸಪ್ಪಾ ಪರಲಗೋಟ, ಕೆಂಪಣ್ಣಾ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT