ಶುಕ್ರವಾರ, ಮೇ 14, 2021
25 °C

ಜ್ಯೋತಿಬಾ ಫುಲೆ ಕೊಡುಗೆ ಅನನ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳ್ಳೂರ: ‘ದೇಶದಲ್ಲಿ ಶಿಕ್ಷಣದ ಮಹತ್ವ ಗುರುತಿಸುವಲ್ಲಿ ಜ್ಯೋತಿಬಾ ಫುಲೆ ಅವರು ನೀಡಿದ ಕೊಡುಗೆ ಅನನ್ಯ ಮತ್ತು ಶ್ರೇಷ್ಠವಾದುದು’ ಎಂದು ರಾಜ್ಯ ಯುವ ಸಂಘಗಳ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ದುರದುಂಡಿ ಹೇಳಿದರು.

ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ ಜ್ಯೋತಿಬಾ ಫುಲೆ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷ ಲಕ್ಷ್ಮಣ ಕತ್ತಿ, ಸದಸ್ಯರು, ಮುಖಂಡರಾದ ಹಣಮಂತ ತೇರದಾಳ, ಭೀಮಶಿ ಮಗದುಮ್ಮ ಇದ್ದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನ ಸಮಿತಿ ಕರ್ನಾಟಕ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಯಿಂದ ಜ್ಯೋತಿಬಾ ಫುಲೆ ಜಯಂತಿ ಆಚರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಮಾರುತಿ ನಾ.ಮಾವರಕರ, ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮಹಿಳಾ ಶಿಕ್ಷಣಕ್ಕೆ ಹೋರಾಡಿದರು

ತೆಲಸಂಗ: ‘ಜ್ಯೋತಿ ಬಾ ಫುಲೆ ಅವರು ಸಾಮಾಜಿಕ ಸಮಾನತೆ ಮತ್ತು ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದರು’ ಎಂದು ತಾ.ಪಂ. ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ ಸ್ಮರಿಸಿದರು.

ಗ್ರಾಮದಲ್ಲಿ ಮಾಳಿ ಸಮಾಜದಿಂದ ಭಾನುವಾರ ಹಮ್ಮಿಕೊಂಡಿದ್ದ ಜ್ಯೋತಿಬಾ ಪುಲೆ ಜಯಂತಿ ಆಚರಣೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ‘ಧರ್ಮ, ಪಂಥ, ಸಂಪ್ರದಾಯ ಮೊದಲಾದ ಸಂಕುಚಿತ ಭಾವನೆಗಳಿಗೆ ಮರುಳಾಗದೆ, ಮಾನವ ಧರ್ಮವನ್ನು ಅಂಗೀಕರಿಸಬೇಕು ಎಂದು ಹೇಳಿದ್ದರು. ಅಂತಹ ಮಹನೀಯರ ಜೀವನವನ್ನು ಯುವಜನರು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಿವೇಕಾನಂದ ಹಳಿಂಗಳಿ ಮಹಾರಾಜರು, ಮಾದೇವ ಪೂಜಾರಿ, ಸುರೇಶ ಖೊಳಂಬಿ, ಮಹಾದೇವ ಬಾಣಿ, ಸಿದ್ರಾಯ ಕಳಸಗೊಂಡ, ಮಲ್ಲಿಕಾರ್ಜುನ ಕಳಸಗೊಂಡ, ಪರಸಪ್ಪ ಥೈಕಾರ, ಧರೆಪ್ಪ ಮಾಳಿ, ಸುಭಾಸ್ ಖೊಬ್ರಿ, ಸುರೇಶ ಥೈಕಾರ, ಆನಂದ ಥೈಕಾರ, ಹಣಮಂತ ಮಾಳಿ, ಬಸು ಕಳಸಗೊಂಡ, ಶ್ರೀಕಾಂತ ಬಿಳ್ಳೂರ, ಶ್ರೀಶೈಲ ಮಾಳಿ, ಮಲ್ಲಿಕಾರ್ಜುನ ಮಾಳಿ, ಸಿದ್ದಪ್ಪ ಕೊಕಟನೂರ, ಅಪ್ಪು ಬಿಜ್ಜರಗಿ, ಆಖಾಶ ಬಾಣಿ, ರಾಜು ಪರ್ನಾಕರ, ರಾಕೇಶ ಮಣ್ಣಪ್ಪಗೋಳ, ಸಂಗು ಕಂದಾರೆ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.