ಸೋಮವಾರ, ಜನವರಿ 18, 2021
19 °C

‘ಫುಲೆ ಆಧುನಿಕ ಭಾರತದ ಶಿಕ್ಷಣ ಕ್ರಾಂತಿ ಹರಿಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಶಾಲಾ ದಿನಗಳಲ್ಲಿ ಬಂಡೆದ್ದ ಹುಡುಗ ಮುಂದೆ ಪ್ರತಿ ಅಸ್ಪೃಶ್ಯ, ಶೂದ್ರ, ಬಡವ ಮತ್ತು ಎಲ್ಲ ಹೆಣ್ಣು ಮಕ್ಕಳು ಕೂಡ ವಿದ್ಯೆಗೆ ಅರ್ಹರು. ಅದು ಅವರ ಹಕ್ಕು ಎಂದು ಹೋರಾಡಿದ ಹಾಗೂ ಜ್ಞಾನ ಸಂಪಾದಿಸಿದರೆ ಯಾರಿಗೂ ತಲೆಬಾಗಬೇಕಿಲ್ಲ ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಜ್ಯೋತಿಬಾ ಫುಲೆ’ ಎಂದು ಶಿಕ್ಷಕ ಸಂತೋಷ ಬಡಕಂಬಿ ಸ್ಮರಿಸಿದರು.

ಫುಲೆ ಬ್ರಿಗೇಡ್ ವತಿಯಿಂದ ರಾಮಲಿಂಗೇಶ್ವರ ಗಜಾನನ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಜ್ಯೋತಿಬಾ ಫುಲೆ ಅವರ 130ನೇ ಪುಣ್ಯಸ್ಮರಣೆ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಕ ಮಲ್ಲಿಕಾರ್ಜುನ ಪ್ಯಾಟಿ, ‘ಬ್ರಿಟಿಷರು ವಿದ್ಯೆಗೆ ಕೊಡುತ್ತಿದ್ದ ಪ್ರಾಮುಖ್ಯತೆಯಿಂದ ಪ್ರೇರಿತರಾಗಿ ಎಲ್ಲರಿಗೂ ವಿದ್ಯಾಭ್ಯಾಸ ಕೊಡಿಸುವ ಪಣ ತೊಟ್ಟ ಧೀಮಂತ ಜ್ಯೋತಿಬಾ ಫುಲೆ’ ಎಂದರು.

ಮುಖಂಡರಾದ ರವಿ ಬಡಕಂಬಿ, ರಮೇಶ ಮಾಳಿ, ಪರಶುರಾಮ ಸೋನಕರ, ಪ್ರಶಾಂತ ತೋಡಕರ, ಬಸವರಾಜ ಹಳ್ಳದಮಳ, ಶ್ರೀಶೈಲ ಬಡಕಂಬಿ, ಅರುಣ ಬಡಕಂಬಿ, ಮಹಾದೇವ ಚಮಕೇರಿ, ಪ್ರವೀಣ ಮಾಳಿ, ಸುಭಾಸ ಮಾಳಿ, ಮಹಾಂತೇಶ ಮಾಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು