ಸಂಕೇಶ್ವರ: ‘ಕನ್ನಡ ನೆಲವು ಕಲೆ, ಸಾಹಿತ್ಯ, ಸಂಸ್ಕೃತಿಯ ನೆಲೆ. ಶಾಸನ, ಮಹಾಕಾವ್ಯ, ವಚನ, ರಗಳೆ, ಸಾಂಗತ್ಯ, ಕೀರ್ತನ ಮುಂತಾದ ಸಾಹಿತ್ಯ ಕೃತಿಗಳಲ್ಲಿ ಕನ್ನಡ ನೆಲದ ಸಂಸ್ಕೃತಿ, ಜನಜೀವನ, ಪ್ರಾಕೃತಿಕ ವೈಭವ, ರಾಜ-ಮಹಾರಾಜರ ಚರಿತ್ರೆಗಳು ಸೇರಿಕೊಂಡಿವೆ’ ಎಂದು ಸಾಹಿತಿ ಡಾ.ಶ್ರೀಶೈಲ ಮಠಪತಿ ಹೇಳಿದರು.

ಸಮೀಪದ ಹೆಬ್ಬಾಳದ ಲ.ಕ.ಖೋತ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಜರುಗಿದ ಕನ್ನಡ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ನಾಡಿಗೆ ವಿಶಿಷ್ಟವಾದ ಚರಿತ್ರೆ ಇದೆ. ರಾಮಾಯಣದ ಕಿಷ್ಕಿಂದೆ (ಹಂಪಿ), ಮಹಾಭಾರತದ ವಿರಾಟ ನಗರಿ(ಹಾನಗಲ್), ಅಶೋಕನ ಶಾಸನಗಳು, ವೈವಿಧ್ಯಮದ ಕಾವ್ಯಗಳು, ಆಕರ್ಷಕವಾದ ಶಿಲ್ಪಕಲಾ ಕೇಂದ್ರಗಳು, ದಟ್ಟವಾಗಿ ಹಬ್ಬಿರುವ ಕಾಡುಗಳು, ಕನ್ನಡದ ಪ್ರಾಕೃತಿಕ ಸೌಂದರ್ಯವನ್ನು, ಸಾಂಸ್ಕೃತಿಕ ವೈಭವವನ್ನು ಅರಿತುಕೊಳ್ಳಲು ಸಹಕರಿಸುತ್ತವೆ. ಶ್ರೀವಿಜಯನ ಕವಿರಾಜ ಮಾರ್ಗ ಕನ್ನಡದ ಪ್ರಥಮ ಕೃತಿ. ಇದಕ್ಕೆ ಜಾಗತಿಕ ಸಾಹಿತ್ಯ ಮಟ್ಟದಲ್ಲಿ ವಿಶೇಷ ಮಹತ್ವವಿದೆ’ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರಾ.ಸರೋಜಿನಿ ಢಂಗ ಮಾತನಾಡಿ, ‘ಇಂದಿನ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ತಾಯಿ ನುಡಿಯನ್ನು ಮರೆತು ಬೇರೆ ಭಾಷೆಗಳಿಗೆ ಮಾರು ಹೋಗುತ್ತಿರುವುದು ವಿಷಾದನೀಯ’ ಎಂದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿ ಕುರಿತಾದ ಹಾಡುಗಳನ್ನು ಹಾಡಿ, ನರ್ತಿಸಿ ವಿಜೃಂಭಿಸಿದರು. ಕೀರ್ತಿ ಯಲಗೌಡನವರ ಸ್ವಾಗತಿಸಿದರು. ವೈಷ್ಣವಿ ಬಡಿಗೇರ ವಂದಿಸಿದರು. ರೂಪಾ ಕಂಕನವಾಡಿ ನಿರೂಪಿಸಿದರು.

Quote - ಕನ್ನಡ ನೆಲದ ವಿಸ್ತಾರ ಜನರ ಮನೋಭಾವ ಧರ್ಮ ಸಮನ್ವಯತೆಯನ್ನು ಸಾರುವ ಅಪರೂಪದ ಕೃತಿ ಪಂಪ ರನ್ನ ಜನ್ನ ನಾಗಚಂದ್ರರ ಕಾವ್ಯಗಳು ಈ ನೆಲದ ಸಂಸ್ಕೃತಿ ಮತ್ತು ಜೀವನ ಮೌಲ್ಯವನ್ನು ಬಿಂಬಿಸುತ್ತವೆ ಡಾ.ಶ್ರೀಶೈಲ ಮಠಪತಿ. ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.